ಬೆಂಗಳೂರು:ಕೊಲೆ ಪ್ರಕರಣದ ಸಂಬಂಧ ಕಳೆದ 45 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ನೋಡಲು ಬನಶಂಕರಿ ದೇವಿ ಪ್ರಸಾದದೊಂದಿಗೆ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದಾರೆ. ನಿನ್ನೆ ಭೀಮನ ಅಮವಾಸ್ಯೆ ನಿಮಿತ್ತ ಶಕ್ತಿ ದೇವತೆ ಬನಶಂಕರಿ ದೇವಸ್ಥಾನದಲ್ಲಿ ಸಂಕಲ್ಪ ಪೂಜೆ ಮಾಡಿಸಿದ್ದರು. ಈ ಹಿನ್ನೆಲೆ ದೇವಿ ಪ್ರಸಾದ ಹಿಡಿದು ದಿನಕರ್ ತೂಗುದೀಪ್ ಜೊತೆ ಮತ್ತೆ ವಿಜಯಲಕ್ಷ್ಮಿ ಜೈಲಿಗೆ ಭೇಟಿ ಕೊಟ್ಟಿದ್ದಾರೆ.