ಬೆಂಗಳೂರು : ಸೀತಾರಾಮ್ ಬಿನೋಯ್ ಎಂಬ ಕ್ರೈಂ ಥ್ರಿಲ್ಲರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಇದೀಗ ಮತ್ತೊಂದು ವಿಭಿನ್ನ ಕಥಾ ಹಂದರದ ಕೇಸ್ ಆಫ್ ಕೊಂಡಾಣ ಎಂಬ ಹೈಪರ್ ಲಿಂಕ್ ಇನ್ವೆಸ್ಟಿಗೇಷನ್ ಸಿನಿಮಾ ಬೆಂಗಳೂರಿನಲ್ಲಿ ನಡೆಯುವ ಕಥೆಯಾಗಿದ್ದು, ಆರಂಭದಲ್ಲಿ ಮೂರು ಕಥೆಗಳು ಪ್ರಯಾಣ ಮುಂದುವರಿಸುತ್ತಾ ಕೊನೆಯಲ್ಲಿ ಹೇಗೆ ಎಲ್ಲವೂ ಒಂದು ಕಡೆ ಸೇರುತ್ತವೆ ಎನ್ನುವುದೇ ಕಥೆಯ ಸಾರಾಂಶವಾಗಿದೆ.

ಚಿತ್ರವು ಒಂದು ರಾತ್ರಿಯಲ್ಲಿ ನಡೆಯುವ ಘಟನೆಯಾಗಿದೆ. ಹೆಚ್ಚು ಕತ್ತಲೆಯಲ್ಲಿ ಚಿತ್ರೀಕರಣ ಮಾಡಿದು ಬೆಂಗಳೂರಿನ ಕೊಂಡಾಣ ಎನ್ನುವ ಕಾಲ್ಪನಿಕ ಸ್ಥಳದಲ್ಲಿ ಮಾಡಲಾಗಿದೆ ವಿಜಯ ರಾಘವೇಂದ್ರ, ಭಾವನಾ ಮೆನನ್, ಖುಷಿ ರವಿ, ರಂಗಾಯಣ ರಘು ಇನ್ನು ಮುಂತಾದವರು ನಟಿಸಿದ್ದಾರೆ.