ತೆಲುಗು ಸಿನಿ ರಂಗದ ಖ್ಯಾತ ನಟ ಪ್ರಭಾಸ್ ಸದ್ಯ ಪ್ಯಾನ್ ಇಂಡಿಯಾದ ಸೂಪರ್ ಸ್ಟಾರ್. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ ಡಾರ್ಲಿಂಗ್ ಸಖತ್ ಬ್ಯುಸಿ ಇದ್ದಾರೆ. ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆ ಸಲಾರ್ ಕೇಸ್ಫೈರ್ ಮೂವಿಯಲ್ಲಿ ರಗಡ್ ಆಗಿ ಕಾಣಿಸಿದ್ದ ಪ್ರಭಾಸ್, ಕಲ್ಕಿಯಲ್ಲೂ ಅಮಿತಾಬ್ ಬಚ್ಚನ್ ಜೊತೆ ಫೈಟ್ ಮಾಡಿದ್ದರು. ಸದ್ಯ ಪ್ರಭಾಸ್ ಅವರದೇ ಎನ್ನಲಾದ ಮತ್ತೊಂದು ಸಿನಿಮಾದ ಮೋಷನ್ ಪೋಸ್ಟರ್ ವಿಡಿಯೋವನ್ನ ರಿವೀಲ್ ಮಾಡಲಾಗಿದೆ.

ಹೊಂಬಾಳೆ ಫಿಲಂ ಜೊತೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ 3 ಸಿನಿಮಾ ಮಾಡುವುದಾಗಿ ಹೇಳಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಹೊಂಬಾಳೆ ಫಿಲಂ ಫಸ್ಟ್ ಲುಕ್ ಅನಾವರಣಗೊಳಿಸಿದೆ. ಈ ಮೂಲಕ ಸಿನಿಪ್ರಿಯರಿಗೆ ಭರ್ಜರಿ ಟ್ರೀಟ್ ನೀಡಿದೆ. ಮಹಾವತಾರ್ ನರಸಿಂಹ ಎಂದು ಸಿನಿಮಾ ಟೈಟಲ್ ಇಡಲಾಗಿದೆ. ಅಶ್ವಿನ್ ಕುಮಾರ್ ಅವರು ಈ ಸಿನಿಮಾದ ನಿರ್ದೇಶಕ ಹಾಗೂ ಸ್ಕ್ರೀನ್ ಪ್ಲೇ ಮಾಡುತ್ತಿದ್ದಾರೆ.
When Faith is Challenged, He Appears.
In a World torn apart by Darkness and Chaos… Witness the Appearance of the Legend, The Half-Man, Half-Lion Avatar-Lord Vishnu’s Most Powerful Incarnation.Experience the Epic Battle between Good and Evil in 3D.… pic.twitter.com/6F4goYzYH9
— Hombale Films (@hombalefilms) November 16, 2024
ಈ ಸಿನಿಮಾ 3D ಅನಿಮೇಷನ್‌ನಲ್ಲಿ ಬರಲಿದ್ದು ಭಾರತದ ಮಹಾಕಾವ್ಯದಲ್ಲಿ ಘಟಿಸಿದಂತಹ ಸನ್ನಿವೇಶಗಳು, ಯುದ್ಧವನ್ನು ಇದು ಹೊಂದಿರುತ್ತದೆ. ಅರ್ಧ ಸಿಂಹ ಹಾಗೂ ಅರ್ಧ ಮನುಷ್ಯ ಅವತಾರ ಹೊಂದಿರುವ ಭಗವಾನ್ ವಿಷ್ಣುವಿನ ಅತ್ಯಂತ ಶಕ್ತಿಶಾಲಿ ಪಾತ್ರವನ್ನು ಈ ಸನಿಮಾದಲ್ಲಿ ಪ್ರೇಕ್ಷಕರು ಕಾಣಬಹುದಾಗಿದೆ. ಇದೊಂದು ಪ್ಯಾನ್ ಇಂಡಿಯಾ ಮೂವಿಯಾಗಿದ್ದು ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ.
ಸದ್ಯ ಹೊಂಬಾಳೆ ಫಿಲಂ ಹೊಸ ಸಿನಿಮಾ ಫಸ್ಟ್ ಲುಕ್ ರಿವೀಲ್ ಮಾಡಿದ್ದು ಈ ಸಿನಿಮಾದಲ್ಲಿ ಹೀರೋ ಪ್ರಭಾಸ್ ಅವರೇ ಎಂಬುದು ಅಧಿಕೃತವಾಗಿ ಹೇಳಿಲ್ಲ. ಆದರೆ ಈ ಸಿನಿಮಾಕ್ಕೆ ಹೀರೋ ಯಾರು ಎಂಬುದು ಹೊಂಬಾಳೆ ಫಿಲಂ ಅಧಿಕೃತವಾಗಿ ಹೇಳಬೇಕಿದೆ. ಆದ್ರೆ ಇದು ಪ್ರಭಾಸ್ ಅವರ ಸಿನಿಮಾವೇ ಎಂಬುದನ್ನು ಮಾತ್ರ ಸಿನಿಮಾ ನಿರ್ಮಾಣ ಸಂಸ್ಥೆ ಬಿಟ್ಟುಕೊಡದೇ ಇರುವುದು ಅಭಿಮಾನಿಗಳಿಗೆ ಬಿಗ್ ಟ್ವಿಸ್ಟ್ ಆಗಿದೆ.


