Wednesday, January 28, 2026
17 C
Bengaluru
Google search engine
LIVE
ಮನೆ#Exclusive Newsಪುಷ್ಪ-3 ಗೆ ವಿಜಯ್​ ದೇವರಕೊಂಡ​ ವಿಲನ್​​​.....!

ಪುಷ್ಪ-3 ಗೆ ವಿಜಯ್​ ದೇವರಕೊಂಡ​ ವಿಲನ್​​​…..!

ದೇಶಾದ್ಯಂತ ಸಂಚಲನ ಮೂಡಿಸಿದ ಪುಷ್ಪ 2 ಸಿನಿಮಾ. 6 ದಿನಗಳಲ್ಲಿ 1000 ಕೋಟಿ ಗಳಿಕೆ ಕಂಡ ಈ ಚಿತ್ರದ ಮುಂದಿನ ಭಾಗ ಬರ್ತಿದೆ. ಈ ಭಾಗದಲ್ಲಿ ರೌಡಿ ಹೀರೋ ನಟಿಸ್ತಾರಂತೆ. ಯಾರು, ಯಾವ ಪಾತ್ರ ಅಂತ ನೋಡೋಣ.

ಪುಷ್ಪ 2 ಚಿತ್ರ ದೇಶಾದ್ಯಂತ ಸೂಪರ್ ಹಿಟ್ ಆಗಿದೆ. 1000 ಕೋಟಿ ಗಳಿಸಿದೆ. ಇನ್ನೂ ಹೆಚ್ಚು ಗಳಿಕೆಯತ್ತ ಸಾಗ್ತಿದೆ. ದೊಡ್ಡ ದೊಡ್ಡ ನಟರಿದ್ರೂ, ಅಲ್ಲು ಅರ್ಜುನ್ ಅವರ ಅಭಿನಯ ಎಲ್ಲರನ್ನೂ ಮೆಚ್ಚಿಸಿದೆ. ಸುಕುಮಾರ್ ನಿರ್ದೇಶನ, ದೇವಿ ಶ್ರೀ ಪ್ರಸಾದ್ ಸಂಗೀತ, ಸ್ಯಾಮ್ ಸಿ.ಎಸ್ ಹಿನ್ನೆಲೆ ಸಂಗೀತ, ರಶ್ಮಿಕಾ ಮಂದಣ್ಣ ಎಲ್ಲರೂ ಗೆಲುವಿಗೆ ಕಾರಣವಾಗಿದೆ.

ಅಲ್ಲು ಅರ್ಜುನ್ ಜಾತ್ರೆ ಸನ್ನಿವೇಶ ರೋಮಾಂಚನಕಾರಿ. ಜಾತ್ರೆ ನೃತ್ಯ, ಜಾತ್ರೆ ಫೈಟ್, ಕ್ಲೈಮ್ಯಾಕ್ಸ್ ಫೈಟ್, ಹಿನ್ನೆಲೆ ಸಂಗೀತ ಎಲ್ಲವೂ ಅದ್ಭುತ. ಈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಗಳು ಖಚಿತ ಅಂತ ಫಿಲ್ಮ್ ಇಂಡಸ್ತ್ರಿಯಲ್ಲಿ ಕೇಳಿಬರ್ತಿದೆ.

ಪುಷ್ಪ 2 ಕ್ಲೈಮ್ಯಾಕ್ಸ್‌ನಲ್ಲಿ ಬಾಂಬ್ ಇಟ್ಟವರು ಯಾರು? ಪುಷ್ಪ 3ರಲ್ಲಿ ಇನ್ನೊಬ್ಬ ಸ್ಟಾರ್ ನಟಿಸ್ತಾರಾ ಅನ್ನೋದು ದೊಡ್ಡ ಚರ್ಚೆ. ಟಾಲಿವುಡ್‌ನ ರೌಡಿ ಹೀರೋ ವಿಜಯ್ ದೇವರಕೊಂಡ ಅಂತೆ ಹೇಳ್ತಿದ್ದಾರೆ.

ರಶ್ಮಿಕಾ ಲವರ್ ನಟಿಸ್ತಿದ್ದಾರಾ ಅಂತ ರಶ್ಮಿಕಾಗೆ ಕೇಳಿದ್ರೆ, ಗೊತ್ತಿಲ್ಲ ಅಂದ್ರಂತೆ. ಅಂದಹಾಗೆ ಪುಷ್ಪಾ 2  ವೇಳೆ ಅಲ್ಲು ಅರ್ಜುನ್, ವಿಜಯ ದೇವರಕೊಂಡ ಭೇಟಿ ಮಾಡಿರುವುದು ಕೂಡ ಮುಂದಿನ ಭಾಗದ ಚಿತ್ರಕತೆಗಾಗಿ ಎಂದು ಹೇಳಲಾಗುತ್ತಿದೆ.

ವಿಜಯ್ ದೇವರಕೊಂಡ ಪುಷ್ಪ 3ರಲ್ಲಿ ನಟಿಸ್ತಾರೆ ಅಂತ ಸಿನಿಮಾ ಮಂದಿ ಮಾತುಗಳು ಕೇಳಿರಬಲಾರಂಭಿಸಿವೆ. ಒಂದು ವೇಳೆ. ನಟಿಸಿದ್ರೆ, ಪುಷ್ಪ 3 ಇಂಡಸ್ಟ್ರಿ ಹಿಟ್ ಆಗುತ್ತೆ ಅಂತ ಸಿನಿಮಾ ವಿಮರ್ಶಕರು ಹೇಳ್ತಿದ್ದಾರೆ.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments