Monday, June 23, 2025
26.3 C
Bengaluru
Google search engine
LIVE
ಮನೆಸಿನಿಮಾಬಾಲಿವುಡ್​ ಹಿರಿಯ ನಟ ಮನೋಜ್ ಕುಮಾರ್​ ಇನ್ನಿಲ್ಲ

ಬಾಲಿವುಡ್​ ಹಿರಿಯ ನಟ ಮನೋಜ್ ಕುಮಾರ್​ ಇನ್ನಿಲ್ಲ

ಮುಂಬೈ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅದರಂತೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವ ನಿಧನಹೊಂದಿದ್ದಾರೆ.

ಮನೋಜ್ ಕುಮಾರ್ ಅವರಿಗೆ 87 ವರ್ಷ ವಯಸ್ಸಾಗಿತ್ತು. ದೇಶಭಕ್ತಿಯ ಚಿತ್ರಗಳಿಗೆ ಹೆಸರುವಾಸಿಯಾಗಿದ್ದರು. ಅದಕ್ಕಾಗಿಯೇ ಅವರು ಬಾಲಿವುಡ್‌ನ ‘ಭರತ್ ಕುಮಾರ್’ ಎಂಬ ಹೆಸರಿನಿಂದ ಪ್ರಸಿದ್ದರಾಗಿದ್ದರು. ಮನೋಜ್ ಕುಮಾರ್ ಅವರ ನಿಜವಾದ ಹೆಸರು ಹರಿ ಕಿಶನ್ ಗಿರಿ ಗೋಸ್ವಾಮಿ ಸಿನಿಮಾದಿಂದ ಪ್ರಭಾವಿತರಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಆದರೆ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ‘ಭರತ್ ಕುಮಾರ್’ ಎಂದು ಕರೆಯುತ್ತಿದ್ದರು. ಅವರು ಅನೇಕ ಅದ್ಭುತ ದೇಶಭಕ್ತಿ ಚಿತ್ರಗಳಲ್ಲಿನ ನಟನೆಯಿಂದ ಪ್ರೇಕ್ಷಕರ ಹೃದಯಗಳನ್ನು ಗೆದ್ದರು. ಅವರು 1957 ರ ‘ಫ್ಯಾಷನ್’ ಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.. ಅವರ ‘ಕಚ್ಚಿ ಕಿ ಗುಡಿಯಾ’ ಚಿತ್ರ 1960 ರಲ್ಲಿ ಬಿಡುಗಡೆಯಾಯಿತು. ಮನೋಜ್ ಕುಮಾರ್ ಅವರು ಉಪ್ಪಾರ್’, ‘ಪತ್ತರ್ ಕೆ ಸನಮ್’, ‘ರೋಟಿ ಕಪ್ಪಾ ಔರ್ ಮಕಾನ್’, ‘ಸನ್ಯಾಸಿ’ ಮತ್ತು ‘ಕ್ರಾಂತಿ’ಯಂತಹ ಅದ್ಭುತ ಚಿತ್ರಗಳನ್ನು ನೀಡಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments