ಧಾರವಾಡ: ಬಿಸಿಲಿನ ತಾಪಮಾನದಿಂದ ಬೇಸತ್ತಿದ್ದ ಪೇಡಾ ನಗರಿ ಜನತೆಗೆ ಇಂದು ಮಧ್ಯಾಹ್ನದ ನಂತರ ಮಳೆರಾಯ ತಂಪೇರೆದಿದ್ದಾನೆ. ಧಾರವಾಡ ಶಹರ ಸೇರಿ ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ವರುಣರಾಯ ಅಬ್ಬರಿಸಿದ್ದಾನೆ.
ಧಾರವಾಡ ನಗರ ಸೇರಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಂಗಳವಾರ ಮಳೆರಾಯ ಅಬ್ಬರಿಸಿದ್ದಾನೆ. ಮಂಗಳವಾರ ಬೆಳಿಗ್ಗೆ ಕೊಂಚ ಮೋಡ ಕವಿದ ವಾತಾವರಣವಿತ್ತು. ಆನಂತರ ಬಿಸಿಲಿನ ಪ್ರಖರತೆ ಹೆಚ್ಚಾಯಿತು. ಬಿಸಿಲಿನ ತಾಪಮಾನಕ್ಕೆ ಜನ ಬಸವಳಿದಿದ್ದರು ಕಳೆದ ಕೆಲ ದಿನಗಳಿಂದ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಇಂದು ಧಾರವಾಡ ತಾಲೂಕಿನ ಯಾದವಾಡ, ಲಕಮಾಪುರ, ಮರೇವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆರಾಯ ಅಬ್ಬರಿಸಿದ್ದು, ಜನರಿಗೆ ಕೊಂಚ ತಂಪಿನ ಅನುಭವವಾಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧಾರವಾಡ ತಾಲೂಕಿನ ವಿವಿಧೆಡೆಗಳಲ್ಲಿ ಮಳೆ ಸುರಿದಿದೆ. ವರ್ಷದ ಮೊದಲ ವರ್ಷಧಾರೆಯ ಆಗಮನದಿಂದ ರೈತರು ಖುಷಿಯಾಗಿದೆ. ಗುಡುಗು, ಸಿಡಿಲಿನ ಜೊತೆಗೆ ಮಳೆರಾಯ ಅಬ್ಬರಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.


