#Exclusive NewsTop Newsಫ್ರೀಡಂ ಟಿವಿ ವಿಶೇಷರಾಜ್ಯಸುದ್ದಿ
ಬೆಂಗಳೂರು ಜಲ ಮಂಡಳಿಯ ಅಕ್ರಮ ವರ್ಗಾವಣೆಗೆ ಬ್ರೇಕ್ ?

ಕೆಲ ದಿನಗಳ ಹಿಂದೆ ರಾತ್ರೋರಾತ್ರಿ 200 ಕ್ಕೂ ಹೆಚ್ಚು ನೌಕರರಿಗೆ ಪೋಸ್ಟಿಂಗ್ ವರ್ಗಾವಣೆ ಆದೇಶವನ್ನು ಹೊರಡಿಸಲಾಗಿತ್ತು, ಬೆಂಗಳೂರು ಜಲ ಮಂಡಳಿಯ ಅಕ್ರಮ ವರ್ಗಾವಣೆ ಪೋಸ್ಟಿಂಗ್ ವಿಚಾರವಾಗಿ ಫ್ರೀಡಂ ಟಿವಿ ವರದಿ ಮಾಡಿತ್ತು, ಇದರ ಬೆನ್ನಲ್ಲೇ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಇದರ ಬಗ್ಗೆ ಗಮನ ಹರಿಸಿದ್ದು, ಸ್ಥಳೀಯ ನಿಯುಕ್ತಿ ರಿಪೋರ್ಟ್ ಪಡೆದಿದ್ದಾರೆ, ಅಧ್ಯಕ್ಷರಿಗೆ ತಪ್ಪು ಮಾಹಿತಿ ನೀಡಿ ನೌಕರರ ವರ್ಗಾವಣೆ ಸ್ಥಳ ನಿಯುಕ್ತಿ ಮಾಡಿರುವ ಆರೋಪ ಕೇಳಿ ಬಂದಿತ್ತು, ಜಲ ಮಂಡಳಿಯ ಮುಖ್ಯ ಆಡಳಿತಾಧಿಕಾರಿ ಬಳಿ ಮಾಹಿತಿ ಕೇಳಿರುವ ರಾಮಪ್ರಸಾದ್.ವರ್ಗಾವಣೆ ಹಾಗೂ ಸ್ಥಳೀಯ ನಿಯುಕ್ತಿ ರದ್ದಾಗುವ ಆತಂಕದಲ್ಲಿ ನೌಕರರು ಇದ್ದಾರೆ




