ಮನರಂಜನೆಸುದ್ದಿ

ಬಿಗ್​​ಬಾಸ್​ ವೇದಿಕೆ ಮೇಲೆ ದರ್ಶನ್​​ ಹೆಸರು ಹೇಳಿದ ಧರ್ಮ ಕೀರ್ತಿರಾಜ್- ಸುದೀಪ್​​ ರಿಯಾಕ್ಷನ್​ ಹೇಗಿತ್ತು?

ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 11 ಈಗಾಗಲೇ ಶುರುವಾಗಿದೆ. ನಟ ಕಿಚ್ಚ ಸುದೀಪ್​​ ಸುಮ್ಮಖದಲ್ಲೇ ಎಲ್ಲಾ ಸ್ಪರ್ಧಿಗಳು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಾಗಿದೆ. ಇದರ ಮಧ್ಯೆ ಕಿಚ್ಚನ ಮುಂದೆಯೇ ಬಿಗ್​ಬಾಸ್​ ವೇದಿಕೆ ಮೇಲೆ ಸ್ಪರ್ಧಿ ಒಬ್ಬರು ದರ್ಶನ್​​ ಬಗ್ಗೆ ಮಾತಾಡಿದ್ದಾರೆ.

ಈ ಬಾರಿ ಬಿಗ್​​ಬಾಸ್​ ಮನೆಗೆ ಸ್ಯಾಂಡಲ್​ವುಡ್​ ನಟ ಕೀರ್ತಿರಾಜ್​ ಮಗ ಧರ್ಮ ಕೀರ್ತಿರಾಜ್​ ಎಂಟ್ರಿ ಕೊಟ್ಟಿದ್ದಾರೆ. ತನ್ನ ಬೆಳವಣಿಗೆಗೆ ಮೂಲ ಕಾರಣ ನಟ ದರ್ಶನ್​ ಎಂದು ವೇದಿಕೆ ಮೇಲೆ ಧರ್ಮ ಹೇಳಿದ್ದಾರೆ.

ಬಿಗ್​​ಬಾಸ್​ ವೇದಿಕೆ ಮೇಲೆ ಮಾತಾಡುವಾಗ ಧರ್ಮ ಅವರು, ನಾನು ನವಗ್ರಹ ಸಿನಿಮಾದಿಂದ ಸ್ಯಾಂಡಲ್​ವುಡ್​​ ಎಂಟ್ರಿ ಕೊಟ್ಟಿದ್ದು. ಇದಕ್ಕೆ ಕಾರಣ ತೂಗುದೀಪ ಪ್ರೊಡಕ್ಷನ್‌. ನನ್ನ ಕರಿಯರ್​​ನಲ್ಲಿ ಮಹತ್ವದ ಪಾತ್ರ ವಹಿಸಿದ್ದು ನಟ ದರ್ಶನ್‌, ದಿನಕರ್‌ ಅವರು ಎಂದರು. ಈ ಸಂದರ್ಭದಲ್ಲಿ ಸುದೀಪ್​​ ಅವರು ಮಾತನ್ನು ಆಲಿಸಿದ್ರು.

ನವಗ್ರಹ ಚಿತ್ರದಲ್ಲಿ ಧರ್ಮ ಚಾಕ್ಲೆಟ್ ಬಾಯ್ ಆಗಿಯೇ ಕಾಣಿಸಿಕೊಂಡಿದ್ರು. ಇವರು ಓ ಮನಸೆ, ಚಾಣಾಕ್ಷ, ಖಡಕ್, ಮುಮ್‌ತಾಜ್‌, ಸುಮನ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಬಿಗ್​ಬಾಸ್​ ಮನೆಗೆ ಹೋಗಿದ್ದಾರೆ.

Comments (0)

Your email address will not be published. Required fields are marked *

Back to top button