ಸಿನಿಮಾ

ಯುಗಾದಿ ಹಬ್ಬ ಹಿನ್ನಲೆ ಡಾಲಿ ದಂಪತಿ ಟೆಂಪಲ್​ರನ್​​

ಹಾಸನ: ಯುಗಾದಿ ಹಬ್ಬದ ಹಿನ್ನಲೆ ನಿನ್ನೆ ನಟ ಡಾಲಿ ಧನಂಜಯ್ ದಂಪತಿ ಹಾಸನ ಜಿಲ್ಲೆಯ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದಾರೆ.

ಪತ್ನಿ ಧನ್ಯಾತಾ ಜೊತೆ ನಟ ಧನಂಜಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿರುವ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಬಳಿಕ ನೆಲದ ಮೇಲೆ ಕುಳಿತು ದಂಪತಿ ಪ್ರಸಾದ ಸ್ವೀಕರಿಸಿ ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ಈ ವೇಳೆ ದಂಪತಿಗೆ ದೇವಾಲಯದ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು

ಡಾ. ಧನ್ಯತಾ ಜೊತೆ ಈ ವರ್ಷ ಫೆ.16ರಂದು ಡಾಲಿ ಮೈಸೂರಿನಲ್ಲಿ ಡಾಲಿ ಅದ್ದೂರಿಯಾಗಿ ಮದುವೆಯಾದರು. ಮದುವೆ ಮತ್ತು ಆರತಕ್ಷತೆಗೆ ಸಿನಿಮಾ ರಂಗ ಮತ್ತು ರಾಜಕೀಯದ ಗಣ್ಯರು ಭಾಗಿಯಾಗಿ ಶುಭಹಾರೈಸಿದ್ದರು.

Comments (0)

Your email address will not be published. Required fields are marked *

Back to top button