Wednesday, April 30, 2025
30.3 C
Bengaluru
LIVE
ಮನೆ#Exclusive Newsಎರಡು ಕಾರು ಮುಖಾಮುಖಿ ಡಿಕ್ಕಿ ; ಒಂದೇ ಕುಟುಂಬದ ನಾಲ್ವರು ದುರ್ಮರಣ

ಎರಡು ಕಾರು ಮುಖಾಮುಖಿ ಡಿಕ್ಕಿ ; ಒಂದೇ ಕುಟುಂಬದ ನಾಲ್ವರು ದುರ್ಮರಣ

ಹಾವೇರಿ : ಬೆಂಗಳೂರಿನ ನೆಲಮಂಗಲದ ಬಳಿ ಕಾರಿನ ಮೇಲೆ ಕಂಟೇನರ್​ ಬಿದ್ದು ಒಂದೇ ಕುಟುಂಬರ್ ಆರು ಜನರು ಮೃತಪಟ್ಟಿರುವ ಭೀಕರ ದುರಂತ ಮಾಸುವ ಮುನ್ನವೇ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ಎರಡು ಕಾರುಗಳ ಮಧ್ಯೆ ಭೀಕರ ರೆಸ್ತ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಕ್ರಾಸ್ ಬಳಿ ನಡೆದಿದೆ. ಚಂದ್ರಮ್ಮ(59), ಮೀನಾ(38), ಮಹೇಶ್​ಕುಮಾರ್, ಧನ್ವೀರ್ ಮೃತರು.

ಇಂದು (ಡಿಸೆಂಬರ್ 25) ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ತಡಸ ಕ್ರಾಸ್ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರೆ, ಇನ್ನಿಬ್ಬರು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. KA 05, NC 4963 ನಂಬರಿನ ಟಾಟಾ ಅಲ್ಟ್ರೋಸ್ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಚಂದ್ರಮ್ಮ ವಯಸ್ಸು 59 ವರ್ಷ, ಚಾಮರಾಜಪೇಟೆ, ಬೆಂಗಳೂರು, ಮೀನಾ ವಯಸ್ಸು 38 ವರ್ಷ, (ಚಂದ್ರಮ್ಮನ ಮಗಳು) ಹರಿಹರ, ಮಹೇಶ್ ಕುಮಾರ್ ಸಿ ,(ಚಾಲಕ ಕಮ್ ಮಾಲೀಕ) ವಯಸ್ಸು 41 ಸಾ-ಹರಿಹರ ದಾವಣಗೆರೆ ಜಿಲ್ಲೆ. ಧನವೀರ ,ವಯಸ್ಸು 11 ವರ್ಷ,-ಹರಿಹರ ಎಂದು ತಿಳಿದುಬಂದಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments