ಟಿವಿಕೆ ಸಿದ್ಧಾಂತ ‘ಹೊಸ ಬಾಟಲಿಯಲ್ಲಿ ಹಳೆಯ ವೈನ್’ ಇದ್ದಂತೆ : ಎಐಎಡಿಎಂಕೆ

ಚನ್ನೈ: ನಟ ವಿಜಯ್ ಸ್ಥಾಪಿಸಿರುವ ವೆಟ್ರಿ ಕಳಗಂ (ಟಿವಿಕೆ)ಪಕ್ಷದ ಸಿದ್ಧಾಂತವನ್ನು ಡಿಎಂಕೆ ಮತ್ತು ಎಐಎಡಿ ಎಂಕೆ ಟೀಕಿಸಿವೆ. ಡಿಎಂಕೆ ‘ಇದು ತಮ್ಮ ಪಕ್ಷದ ಸಿದ್ಧಾಂತದ ನಕಲು’ ಎಂದರೆ, ‘ಟಿವಿಕೆ ಹಳೆ ಬಾಟಲ್‌ನಲ್ಲಿ ಹೊಸ ವೈನ್‌ನಂತಿದೆ’ ಎಂದು ಎಐಎಡಿಎಂಕೆ ವ್ಯಂಗ್ಯವಾಡಿದೆ. ಭಾನುವಾರ ಮೊದಲ ಬಾರಿ ಪಕ್ಷದ ಸಮಾವೇಶದಲ್ಲಿ ಮಾತನಾಡಿದ್ದ ವಿಜಯ್, ಆಡಳಿತರೂಢ ಡಿಎಂಕೆ ವಿರುದ್ದ ಹರಿಹಾಯ್ದಿದ್ದರು. ಒಂದು ಕುಟುಂಬ ಇಡೀ ರಾಜ್ಯವನ್ನು ಲೂಟಿ ಮಾಡುತ್ತಿದೆ ಎನ್ನುತ್ತಾ ದ್ರಾವಿಡ ರಾಷ್ಟ್ರೀಯತೆ, ತಮಿಳು ರಾಷ್ಟ್ರೀಯತೆ ಬಗ್ಗೆ ಹೇಳಿದ್ದರು. ಇದಕ್ಕೆ ಡಿಎಂಕೆ ಪ್ರತಿಕ್ರಿಯಿಸಿ, ‘ಡಿಎಂಕೆ ಸುದೀರ್ಘ ಇತಿಹಾಸದಲ್ಲಿ ಹಲವು ವೈರಿಗಳನ್ನು ಕಂಡಿದೆ. ಇವೆಲ್ಲವೂ ನಮ್ಮ ತತ್ವಗಳು. ಅದನ್ನವರು ನಕಲಿಸಿದ್ದಾರೆ. ಈಗ ಅವರು ಹೇಳುತ್ತಿರುವುದನ್ನು ನಾವು ಮುಂಚೆ ಹೇಳಿದ್ದೇವೆ ಮತ್ತು ಅನುಸರಿಸುತ್ತಿದ್ದೇವೆ’ ಎಂದಿದೆ. ಇತ್ತ ಎಐಎಡಿಎಂಕೆ ಕೂಡ ಪ್ರತಿಕ್ರಿಯಿಸಿ ‘ಎಲ್ಲ ಪಕ್ಷಗಳ ಸಿದ್ದಾಂತ ಮತ್ತು ಹೊಸ ಬಾಟಲ್‌ನಲ್ಲಿನ ಹಳೆ ವೈನ್ ಇದ್ದಂತೆ. ಟಿವಿಕೆ ಸಿದ್ದಾಂತವು ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳಿಂದ ತೆಗೆದುಕೊಂಡ ಕಾಸ್ಟೈಲ್ ಸಿದ್ಧಾಂತ’ ಎಂದಿದೆ.




