ಕ್ರಮ ಕಟ್ಟಡ ಕುಸಿತಕ್ಕೆ ತುಷಾರ್ ಗಿರಿನಾಥ್ ಹೊಣೆ ಹೊರಬೇಕು, ಕೂಡಲೇ ರಾಜೀನಾಮೆ ನೀಡಲು ಆಮ್ ಆದ್ಮಿಪಕ್ಷದ ಆಗ್ರಹ
ನಗರದ ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರದ ಬಾಬುಸಾಬ್ ಪಾಳ್ಯದಲ್ಲಿ ನಡೆದ ಅಕ್ರಮ ಕಟ್ಟಡ ಕುಸಿತದ ಹೊಣೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೊರಬೇಕು ಹಾಗೂ ಈ ಕೂಡಲೇ ಈ ಅಧಿಕಾರಿಯ ರಾಜೀನಾಮೆಯನ್ನು ಪಡೆಯಬೇಕೆಂದು ಆಮ್ ಆದ್ಮಿ ಪಕ್ಷ ಇಂದಿಲ್ಲಿ ಒತ್ತಾಯಿಸಿದೆ.
ಅವಘಡ ನಡೆದ ಸ್ಥಳಕ್ಕೆ ಪಕ್ಷದ ಕಾರ್ಯಕರ್ತರುಗಳು ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕೆ .ಆರ್. ಪುರಂ ಕ್ಷೇತ್ರದ ಪಕ್ಷದ ಮುಖಂಡರು ಹಾಗೂ ರಾಜ್ಯ ವೈದ್ಯರುಗಳ ಘಟಕದ ಅಧ್ಯಕ್ಷ ಡಾ. ಕೇಶವಕುಮಾರ್ ಹಾಗೂ ವಿಧಾನಸಭೆಯ ಅಧ್ಯಕ್ಷ ದಿಲೀಪ್ ಕುಮಾರ್ ಈ ಬಗ್ಗೆ ಸರ್ಕಾರವನ್ನು ಆಗ್ರಹಿಸಿದರು.
ಅನುಮೋದನೆಗೆ ವಿರುದ್ಧವಾಗಿ ಏಳು ಅಂತಸ್ತಿನ ಕಟ್ಟಡವನ್ನು ಅಕ್ರಮವಾಗಿ ಕಟ್ಟುತ್ತಿದ್ದ ಕಟ್ಟಡ ಮಾಲೀಕ ಹಾಗೂ ಗುತ್ತಿಗೆದಾರ ನಾಪತ್ತೆಯಾಗಿದ್ದಾರೆ. ಹೊರ ರಾಜ್ಯಗಳ ಅಮಾಯಕ ಏಳು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಏನ್ ಡಿ ಆರ್ ಎಫ್ ಸಿಬ್ಬಂದಿ ಸತತವಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು ಸಹ ಇಲ್ಲಿ ವಾಸಿಸುತ್ತಿರುವ 50 ಕಾರ್ಮಿಕ ಕುಟುಂಬಗಳಿಗೆ ನಿನ್ನೆಯಿಂದಲೂ ಅನ್ನ ಆಹಾರವಿಲ್ಲದೆ ಬಳಲುತ್ತಿದ್ದಾರೆ. ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ನಾಮಕಾವಸ್ತೆ ನಿನ್ನೆ ಭೇಟಿ ನೀಡಿ ಯಾವುದೇ ಕ್ರಮ ಕೈಗೊಳ್ಳದೆ ಹೊರಟಿದ್ದಾರೆ.
ಇದೇ ರೀತಿಯ ಅಕ್ರಮ ಕಟ್ಟಡಗಳು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲೂ ತಲೆಯೆತ್ತಿ ನಿಂತಿವೆ, ಇವುಗಳ ಸುರಕ್ಷತೆಯ ಬಗ್ಗೆ ಯಾವುದೇ ಖಾತರಿ ಇಲ್ಲದಾಗಿದೆ ಹಾಗೂ ಬಿಬಿಎಂಪಿಯ ಉನ್ನತ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಪಕ್ಷದ ಕಾರ್ಯಕರ್ತರುಗಳು ಒತ್ತಾಯಿಸಿದರು.
ವಂದನೆಗಳೊಂದಿಗೆ
ಜಗದೀಶ್ ವಿ. ಸದಂ
ರಾಜ್ಯ ಮಾಧ್ಯಮ ಸಂಚಾಲಕರು