ತುಮಕೂರು ; ವೈಕುಂಠ ಏಕಾದಶಿ ಹಿನ್ನೆಲೆ ವರ್ತಿಕಟ್ಟೆ ಶಾಲೆಯ ಮಕ್ಕಳು ಗುಡ್ಡದ ರಂಗನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದರು.ಗುಬ್ಬಿ ತಾಲೂಕು ಚೇಳೂರು ಹೋಬಳಿಯ ವರ್ತಿಕಟ್ಟೆಯಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಗುಡ್ಡದ ರಂಗನಾಥ ದೇಗುಲದಲ್ಲಿ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು.
- ವೈಕುಂಠ ಏಕಾದಶಿ ಪ್ರಯುಕ್ತ ಹಿನ್ನೆಲೆ..
- ಗುಡ್ಡದ ರಂಗನಾಥ ಸ್ವಾಮಿಗೆ ವಿಶೇಷ ಅಲಂಕಾರ
- ವರ್ತಿ ಕಟ್ಟೆ ಮತ್ತು ತೊಳೆಕೊಪ್ಪ ವಿದ್ಯಾರ್ಥಿಗಳು ಭೆಟಿ
- ಸರ್ಕಾರಿ ಶಾಲೆಯ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು
ವಿಶೇಷವೆನೆಂದರೆ,ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ-ಪುನಸ್ಕಾರ,ವಿವಿಧ ಹೂವುಗಳಿಂದ ಅಲಂಕಾರ ಮಾಡಿರುತ್ತಾರೆ.ಈ ವೇಳೆ ಭಕ್ತರಿಗೆ ಪ್ರಸಾದ ಹಂಚಿ ವೈಕುಂಠ ಏಕಾದಶಿ ಆಚರಿಸಿರುತ್ತಾರೆ.
ಆದರೆ ,ತೂಮಕುರು ಜಿಲ್ಲೆಯ ಗುಬ್ಬಿ ತಾಲೂಕಿನ ಗುಡ್ಡದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರದೊಂದಿಗೆ ಪರಿಸರ ಕುರಿತಾಗಿ ಅರಿವು ಮೂಡಿಸುವುದರ ಜೊತೆಗೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತಾಗಿ ವರ್ತಿ ಕಟ್ಟೆ ಮತ್ತು ತೊಳೆಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗು ದೇಗುಲದ ಅರ್ಚಕರು ಉಪಸ್ಥಿತರಿದ್ದರು.