ತುಮಕೂರು : ಸರ್ಕಾರ ಶಕ್ತಿ ಯೋಜನೆ ವಿರುದ್ಧ ವಿದ್ಯಾರ್ಥಿನಿಯರು ಸಿಡಿದೆದ್ದಿದ್ದಾರೆ. ತುಮಕೂರಿನ ಕುಣಿಗಲ್ ಬಸ್ ನಿಲ್ದಾಣದಲ್ಲಿ ಸ್ಟೂಡೆಂಟ್ಸ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು , ಇದು ಯಾಕೆ ಬೇಕಿತ್ತು ಸಾರ್.. ಮೊದ್ಲು ಸ್ಟೂಡೆಂಟ್ಸ್ ಗೆ ಕೊಡಿಬೇಕಿತ್ತು. ಮಂಗಳವಾರ, ಶುಕ್ರವಾರ ಬಂದ್ರೆ ಸಾಕು ಜನ ದೇವಾಸ್ಥಾನಕ್ಕೆ ಹೋಗ್ತಾರೆ
ನಾವ್ ಇರಲಿ.. ವಯಸ್ಸಾದವರು.. ಮಕ್ಕಳು ಕೂಡ ಬಸ್ ಹತ್ತೋಕ್ಕಾಗಲ್ಲ. ಹತ್ತು ನಿಮಿಷ ಲೇಟ್ ಆಯ್ತು ಅಂದರೆ ಕ್ಲಾಸ್ ಗೆ ಒಳಗೆ ಬಿಡೋದಿಲ್ಲ ಎಂದರು.
ಸೂರ್ಯ ಹುಟ್ಟುವ ಮೊದಲೇ ನಾವ್ ಬಸ್ ಸ್ಟಾಂಡ್ ಗೆ ಬಂದ್ರೂ ಆಗ್ತಾ ಇಲ್ಲ. ಬಸ್ ನಿಲ್ದಾಣದಲ್ಲಿ ಜನ ತುಂಬಿಸಿಕೊಂಡು ಮುಂದಿನ ಸ್ಟಾಪ್ ನಲ್ಲಿ ನಿಲ್ಲಿಸೋದಿಲ್ಲ.
ಶಕ್ತಿ ಯೋಜನೆಯಿಂದ ಮನೆಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಅನುಮಾನ ಪಡುವಂತಾಗಿದೆ. ಮನೆಗಳಲ್ಲಿ ಕಾಲೇಜು ಮುಗಿದರೂ ಯಾಕೆ ಲೇಟ್ ಅಂತಾ ಕೇಳ್ತಾರೆ ಏನ್ ಹೇಳೋದು ಎಂದು ವಿದ್ಯಾರ್ಥಿನಿಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.


