ಸುಪ್ರೀಂ ಕೋರ್ಟಿನ ಮೇಲೆ ರಾಜಕೀಯವಾಗಿ ಸೂಕ್ಷ್ಮವಾಗಿರುವ ಕೆಲವು ಪ್ರಕರಣಗಳನ್ನ ಸುಪ್ರೀಂಕೋರ್ಟಿನ ಕೆಲವು ನ್ಯಾಯಮೂರ್ತಿಗಳಿಗೆ ಮಾತ್ರ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪಕ್ಕೆ ಇದೀಗ ಪ್ರತಿಕ್ರಿಯೆ ನೀಡಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಡಿ.ವೈ ಚಂದ್ರಚೂಡ್, ನ್ಯಾಯಾಲಯಗಳ ಮೇಲೆ ವಿಶ್ವಾಸ ಬರಬೇಕು ಅಂದ್ರೆ ವಕೀಲರಿಂದ ಪ್ರಭಾವಿತರಾಗಬಾರದು ಅಂದಿದ್ದಾರೆ. ಈ ವಿಚಾರದಲ್ಲಿ ತಾವು ಸ್ಪಷ್ಟ ನಿಲು ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಪ್ರಕರಣವೂ ಇಂಥದ್ದೇ ನ್ಯಾಯಮೂರ್ತಿಯ ಎದುರು ವಿಚಾರಣೆಗೆ ಬರಬೇಕು ಎಂದು ಯಾವ ವಕೀಲರು ಆಗ್ರಹಿಸುವಂತಿಲ್ಲ ಎಂದು ಸಿಜೆಐ ತಿಳಿಸಿದ್ದಾರೆ.

ಇನ್ನು ಯಾವುದೇ ಪ್ರಕರಣದಲ್ಲಿ ಬರುವ ತೀರ್ಪನ್ನು ನ್ಯಾಯಾಮೂರ್ತಿಗಳು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಸಾಕ್ಷಿ ಆಧಾರಗಳಷ್ಟೆ ಪರಿಗಣನೆಯಾಗಬೇಕು ಎಂದಿದ್ದಾರೆ. ಇನ್ನು ವಕೀಲರಿಂದ ಯಾರು ಕೂಡ ಪ್ರಭಾವಿತರಾಗದೇ, ವಕೀಲರು ಕೂಡ ತಮ್ಮ ಪ್ರಕರಣಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳೋದು ಕಾನೂನು ಪರಿಪಾಲಿಸುವ ದೃಷ್ಟಿಯಲ್ಲಷ್ಟೆ ನೋಡಬೇಕು ಎಂದು ತಿಳಿಸಿದ್ದಾರೆ.