Top Newsರಾಜಕೀಯಸುದ್ದಿ

ಭಾರತಕ್ಕೆ ಸುಂಕ ಬೆದರಿಕೆ ಹಾಕಿದ: ಡೊನಾಲ್ಡ್‌ ಟ್ರಂಪ್

ವಾಷಿಂಗ್ಟನ್: ಭಾರತ ಚೀನಾ ಮತ್ತು ಬ್ರೆಜಿಲ್ ದೇಶಗಳು ಅಮೆರಿಕದ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸುತ್ತಿವೆ. ಇದರಿಂದ ಅಮೆರಿಕಕ್ಕೆ ಹಾನಿ ಉಮಟಾಗುತ್ತಿದೆ. ಹಾಗಾಗಿ ಅಮೆರಿಕ ಕೂಡ ಈ ದೇಶಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಭಾರತ, ಚೀನಾ ಸದಸ್ಯರಾಗಿರುವ ಬ್ರಿಕ್ಸ್ ದೆಶಗಳ ಮೇಲೆ ಶೇ 100ರಷ್ಟು ಆಮದು ಸುಂಕ ವಿಧಿಸುವ ಬಗ್ಗೆ ಟ್ರಂಪ್ ಅವರು ಈ ಹಿಂದೆ ಹಲವು ಬಾರಿ ಹೇಳೀದ್ದರು.

ಫ್ಲಾರಿಡಾದಲ್ಲಿ ಸೋಮವಾರ ನಡೆದ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಮೆರಿಕಕ್ಕೆ ಹಾನಿ ಉಂಟು ಮಾಡುತ್ತಿರುವ ಅವರು ತಮ್ಮ ದೇಶಕ್ಕೆ ಒಳಿತಾಗಲಿ ಎಂದು ಬಯಸುತ್ತಿದ್ದಾರೆ. ಅಷ್ಟೇ. ಈ ಕಾರಣಕ್ಕಾಗಿ ಅವರು ನಮ್ಮ ಮೇಲೆ ಅಧಿಕ ಆಮದು ಸುಂಕ ವಿಧಿಸುತ್ತಿದ್ದಾರೆ ಎಂದು.

ಅಮೆರಿಕವೇ ಮಾದಲ ಎನ್ನುವ ನಮ್ಮ ಆರ್ಥಿಕ ನೀತಿ ಅನ್ವಯ ನಾವು ಬೇರೆ ದೇಶಗಳ ಮೇಲೆ ಹೆಚ್ಚಿನ ಪ್ರಮಾಣದ ಸುಂಕಗಳನ್ನು ವಿಧಿಸುತ್ತೇವೆ. ಅಮೆರಿಕದ ಕಾರ್ಮಿಕರು, ಉದ್ಯಮಿಗಳ ಮೇಲಿನ ತೆರಿಗೆಯನ್ನು ಕಡಿತ ಮಾಡುತ್ತೇವೆ. ಈ ಮೂಲಕ ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುತ್ತೇವೆ ಎಂದರು.

ಭಾರತದೊಂದಿಗೆ ಅಮೆರಿಕದ ಬಾಂಧವ್ಯ ಚೆನ್ನಾಗಿದೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಬಹುಶಃ ಫೆಬ್ರವರಿಯಲ್ಲಿ ಅಮೆರಿಕಕ್ಕೆ ಬರಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.

Comments (0)

Your email address will not be published. Required fields are marked *

Back to top button