Top Newsಸುದ್ದಿ

ಡೊನಾಲ್ಡ್ ಟ್ರಂಪ್ ಹೊಸದಾಗಿ ಎಲೆಕ್ಟ್ರಿಕ್ ಗಿಟಾರ್ ಪ್ರಾರಂಭಿಸಿದ..

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಹೊಸ ವ್ಯವಹಾರ ಆರಂಭಿಸಿದ್ದಾರೆ. ಹೊಸದಾಗಿ ಎಲೆಕ್ಟ್ರಿಕ್ ಗಿಟಾರ್ ವ್ಯಾಪಾರವನ್ನು ಪ್ರಾರಂಭಿಸಿದ್ದು, ಈ ಗಿಟಾರ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅದರಲ್ಲೂ ಅಮೆರಿಕದ ಧ್ವಜ ಮತ್ತು ಹದ್ದಿನ ಆಕೃತಿಗಳು ಈ ಗಿಟಾರ್ ನಲ್ಲಿ ಆಕರ್ಷಕವಾಗಿ ಕಾಣುತ್ತವೆ. ‘ಮೇಕ್ ಅಮೇರಿಕಾ ಗ್ರೇಟ್ ಅಗೇನ್’ ಎಂಬ ಘೋಷವಾಕ್ಯಗಳನ್ನು ಕಾಣಬಹುದು. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಟೋಗ್ರಾಫ್ ಹೊಂದಿರುವ ಎಲೆಕ್ಟ್ರಿಕ್ ಗಿಟಾರ್‌ಗಳಿಗೆ ವಿಶೇಷ ಬೆಲೆ ನಿಗದಿಪಡಿಸಲಾಗಿದೆ.ಟ್ರಂಪ್ ಸಹಿ ಮಾಡಿರುವ ಗಿಟಾರ್ ಗಳ ಬೆಲೆ 10 ಸಾವಿರ ಡಾಲರ್ ಎಂದು ಟ್ರಂಪ್  ಬಹಿರಂಗಪಡಿಸಿದೆ.

ಮಾರಾಟಕ್ಕಿರುವ ಒಟ್ಟು 1,300 ಗಿಟಾರ್‌ಗಳಲ್ಲಿ 1,000 ಕ್ಕಿಂತ ಹೆಚ್ಚು ಗಿಟಾರ್‌ಗಳನ್ನು $1,250 ರಿಂದ $1,500 ಕ್ಕೆ ಮಾರಾಟ ಮಾಡುತ್ತಾರೆ. ಟ್ರಂಪ್ ಅವರ ಆಟೋಗ್ರಾಫ್ ಹೊಂದಿರುವ ಎಲೆಕ್ಟ್ರಿಕ್ ಗಿಟಾರ್‌ಗಳಿಗೆ ವಿಶೇಷ ಬೆಲೆ ನಿಗದಿಪಡಿಸಲಾಗಿದೆ. ಟ್ರಂಪ್ ಸಹಿ ಮಾಡಿರುವ ಗಿಟಾರ್ ಗಳ ಬೆಲೆ 10 ಸಾವಿರ ಡಾಲರ್ (8.45 ಲಕ್ಷ ರೂ.) ಎಂದು ಘೋಷಿಸಲಾಗಿದ್ದು, ಸಹಿ ಹಾಕಿದ ಗಿಟಾರ್​ ಕೇವಲ 275 ಮಾತ್ರ ಇವೆ.

 

Comments (0)

Your email address will not be published. Required fields are marked *

Back to top button