ಜಿಲ್ಲೆರಾಜಕೀಯರಾಜ್ಯ

ರೈಲಿನಲ್ಲಿ ಪ್ರಯಾಣ ಮಾಡೋರು ಹುಷಾರ್ ಮಿಸ್ ಮಾಡ್ದೆ ನೋಡಲೇಬೇಕಾದ ಸ್ಟೋರಿ!

ನೈರುತ್ಯ ರೈಲ್ವೆಯು ಟಿಕೆಟ್ ರಹಿತ ಪ್ರಯಾಣದ 627014 ಪ್ರಕರಣಗಳನ್ನು ದಾಖಲಿಸಿ ಈ ಹಣಕಾಸು ವರ್ಷದಲ್ಲಿ ಡಿಸೆಂಬರ್ 2023 ರವರೆಗೆ 46.31 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ. ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು 368205 ಪ್ರಕರಣಗಳನ್ನು ದಾಖಲಿಸಿ, 28.26 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದ್ದು ನೈರುತ್ಯ ರೈಲ್ವೆಯ ಟಿಕೆಟ್ ತಪಾಸಣಾ ಸಿಬ್ಬಂದಿ ಶ್ಲಾಘನೀಯ ಕೆಲಸ ಮಾಡಿದ್ದಾರೆ.

ನೈರುತ್ಯ ರೈಲ್ವೆಯು ಈ ಹಣಕಾಸು ವರ್ಷದಲ್ಲಿ ಡಿಸೆಂಬರ್-2023 ವರೆಗೆ ಟಿಕೆಟ್ ರಹಿತ ಪ್ರಯಾಣದ 627014 ಪ್ರಕರಣಗಳನ್ನು ದಾಖಲಿಸಿ, 46.31 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 9.95% ಹೆಚ್ಚಳವಾಗಿದೆ. ಇದು ನೈರುತ್ಯ ರೈಲ್ವೆ ಪ್ರಾರಂಭವಾದಾಗಿನಿಂದ ಅತಿ ಹೆಚ್ಚು ದಂಡ ವಸೂಲಿ ಆಗಿದೆ. 2023 ರ ಡಿಸೆಂಬರ್ ತಿಂಗಳಲ್ಲಿ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ 72041 ಪ್ರಕರಣಗಳನ್ನು ದಾಖಲಿಸಿ 5.13 ಕೋಟಿ ರೂಪಾಯಿಗಳ ದಂಡವನ್ನು ಸಂಗ್ರಹಿಸಲಾಗಿದೆ.

ರೈಲ್ವೆ ಕಾಯ್ದೆ, 1989 ರ ಸೆಕ್ಷನ್ 138 ರ ಪ್ರಕಾರ, ಯಾವುದೇ ಪ್ರಯಾಣಿಕರು ಸರಿಯಾದ ಪಾಸ್ / ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಕಂಡುಬಂದಲ್ಲಿ ₹ 250 ದಂಡ ಅಥವಾ ಶುಲ್ಕಕ್ಕೆ ಸಮನಾಗಿರುತ್ತದೆ (ಅವರು ಪ್ರಯಾಣಿಸಿದ ದೂರಕ್ಕೆ ಅಥವಾ ರೈಲು ಪ್ರಾರಂಭವಾದ ನಿಲ್ದಾಣದಿಂದ ಸಾಮಾನ್ಯ ಏಕ ಶುಲ್ಕ ಮತ್ತು ಹೆಚ್ಚುವರಿ ಶುಲ್ಕಗಳು ಅಂದರೆ ₹ 250) ಯಾವುದು ಹೆಚ್ಚಿದೆಯೋ ಅದನ್ನು ವಿಧಿಸಲಾಗುತ್ತದೆ. ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ಅವರು ಟಿಕೆಟ್ ತಪಾಸಣೆಯಲ್ಲಿ ಶ್ಲಾಘನೀಯ ಪ್ರಯತ್ನಗಳಿಗಾಗಿ ಟಿಕೆಟ್ ತಪಾಸಣಾ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://youtu.be/IlsA3vt9AjQ?si=Kl2R0ukS-CF3Af1z

Comments (0)

Your email address will not be published. Required fields are marked *

Back to top button