
ಚಿಕ್ಕಮಗಳೂರು: ಕಡೂರು ಪಟ್ಟಣದ ಬಿಸಿಲೇಹಳ್ಳಿ ಗ್ರಾಮದ ರಂಜಿತ್ ಎಂಬ ವ್ಯಕ್ತಿ ಹೆಲ್ಮೆಟ್ ಧರಿಸದೆ, ಒನ್-ವೇ ರೈಡಿಂಗ್ ಹಾಗೂ ಡ್ರಿಂಕ್ & ಡ್ರೈವ್ ಮಾಡುವಂತಹ ಹಲವು ಟ್ರಾಫಿಕ್ ನಿಯಮ ಉಲ್ಲಂಘನೆಗಳನ್ನು ಮಾಡಿದ್ದ ಹಿನ್ನೆಲೆ ಚಿಕ್ಕಮಗಳೂರು ನ್ಯಾಯಾಲಯ ಅದಕ್ಕೆ ವಿಭಿನ್ನ ಶಿಕ್ಷೆ ವಿಧಿಸಿದೆ.
ನ್ಯಾಯಾಲಯದ ಆದೇಶದಂತೆ, ರಂಜಿತ್ ಈ ದಿನ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಕಡೂರು ಪಟ್ಟಣದ ಮಲ್ಲೇಶ್ವರ ಸರ್ಕಲ್ನಲ್ಲಿ ಬೋರ್ಡ್ ಹಿಡಿದು ನಿಂತಿದ್ದ. ಈ ವೇಳೆ ಪೊಲೀಸರೊಬ್ಬರನ್ನು ನಿಯೋಜಿಸಿ ತಪ್ಪಿತಸ್ಥನು ಕಾನೂನು ಪಾಲನೆ ಮಾಡುತ್ತಾನೋ ಎಂದು ಗಮನಿಸಬೇಕೆಂದು ಸೂಚನೆ ನೀಡಲಾಗಿತ್ತು. ದಿನದ ಶಿಕ್ಷೆ ಪೂರ್ಣಗೊಂಡ ನಂತರ ಪೊಲೀಸ್ ಅಧಿಕಾರಿಗಳು ಕೋರ್ಟ್ಗೆ ವರದಿ ಸಲ್ಲಿಸಲು ಕೋರ್ಟ್ ಆದೇಶಿಸಿದ್ದು, ಈ ರೀತಿಯ ವಿಭಿನ್ನ ಶಿಕ್ಷೆಯ ಮೂಲಕ ಸಾರ್ವಜನಿಕರಿಗೆ ಟ್ರಾಫಿಕ್ ನಿಯಮ ಪಾಲನೆಯ ಮಹತ್ವವನ್ನು ತೋರಿಸಲು ಪ್ರಯತ್ನಿಸಲಾಗಿದೆ.
ಸಾರ್ವಜನಿಕರು ಈ ಕ್ರಮವನ್ನು ಮೆಚ್ಚಿಕೊಂಡಿದ್ದು, 500–1000 ರೂ. ದಂಡ ಬದಲು ಇಡೀ ದಿನ ನಿಂತು ಶಿಕ್ಷೆ ಭೋಗಿಸುವುದು, ನಿಯಮ ಉಲ್ಲಂಘನೆಯ ಬಗ್ಗೆ ಭಯವನ್ನೂ, ಜಾಗರೂಕತೆಯನ್ನೂ ಹೆಚ್ಚಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




