Freedom TV

ಮನೆ ಬಾಗಿಲಿಗೆ ಬರಲಿದ್ದಾರೆ ಟ್ರಾಫಿಕ್ ಪೊಲೀಸರು: ಸಂಚಾರ ನಿಯಮ ಉಲ್ಲಂಘನೆ ಮಾಡಿರೋರಿಗೆ ಕಾದಿದೆ ಕಂಟಕ

ಬೆಂಗಳೂರು: ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಸಂಚಾರಿ ಪೊಲೀಸರು ವಾಹನ ಸವಾರರಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಅದಾಗ್ಯೂ, ಪದೇಪದೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಲೈಸನ್ಸ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದರು. ಇದೀಗ, ಪೊಲೀಸರು ಇನ್ನೂ ಒಂದು ಮುಂದೆ ಹೆಜ್ಜೆ ಮುಂದಿಟ್ಟಿದ್ದು, ನಿರಂತರ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಕಂಟಕ ಕಾದಿದೆ.

ಇನ್ನು ನಿರಂತರ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಟ್ರಾಫಿಕ್ ಪೊಲೀಸರು ಅಂತಹ ವಾಹನ ಸವಾರರ ಮನೆ ಬಾಗಿಲಿಗೆ ಬಂದು ದಂಡದ ಹಣ ವಸೂಲಿ ಮಾಡಲಿದ್ದಾರೆ. ಆದರೆ ಪೊಲೀಸರು ಎಲ್ಲಾ ವಾಹನ ಸವಾರರ ಮನೆಬಾಗಿಲಿಗೆ ಬರುವುದಿಲ್ಲ. ನಿಮ್ಮ ವಾಹನ 50 ಸಾವಿರಕ್ಕೂ ಅಧಿಕ ದಂಡದ ಹೊಂದಿದ್ದರೆ ಮಾತ್ರ ಪೊಲೀಸರು ಮನೆಗೆ ಬಂದು ದಂಡ ವಸೂಲಿ ಮಾಡಲಿದ್ದಾರೆ.

2300 ಕ್ಕೂ ಅಧಿಕ ವಾಹನಗಳು 50 ಸಾವಿರಕ್ಕೂ ಅಧಿಕ ದಂಡ ಹೊಂದಿದ್ದು, ಈಗಾಗಲೇ ಹಲವು ವಾಹನ ಮಾಲೀಕರಿಂದ ದಂಡ ಸಂಗ್ರಹ ಮಾಡಲಾಗಿದೆ. ಟ್ರಾಫಿಕ್ ಫೈನ್ ಕಟ್ಟದಿದ್ದರೆ ಅಂತಹ ವಾಹನ ಸವಾರರ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲಿದ್ದು, ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಲಿದೆ.

Comments (0)

Your email address will not be published. Required fields are marked *

Back to top button