ಶಿವಮೊಗ್ಗ: ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ಮಂಗನ ದಾಳಿಗೆ ಇಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದೆ. ಶಿರಾಳಕೊಪ್ಪ ಸಮೀಪದ ಸುಣ್ಣದಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ.
ಇಲ್ಲಿನ ಗ್ರಾಮದಲ್ಲಿ ಮಂಗವೊಂದು ಟ್ರ್ಯಾಕ್ಟರ್ ಸೌಂಡ್ ಕೇಳುತ್ತಲೇ ಮನುಷ್ಯರ ಮೇಲೆ ದಾಳಿ ಮಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹೀಗೆ ಮಂಗ ನಡೆಸಿದ ದಾಳಿಯಲ್ಲಿ ಇಬ್ಬರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಟ್ರ್ಯಾಕ್ಟರ್ ಓಡಾಡುವ ಶಬ್ದ ಕೇಳುತ್ತಲೇ ಅದರ ಡ್ರೈವರ್ ಮೇಲೆ ದಾಳಿ ಮಾಡುವ ಮಂಗ ಅವರ ಅಂಗಿ, ಪಂಚೆ ಹರಿದು ಪರಚುತ್ತಿದೆ.
ಈ ಮಂಗವನ್ನ ಹಿಡಿದು ಜನರಿಗೆ ರಕ್ಷಣೆ ನೀಡಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಇನ್ನು ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ದಾರೆ ಎಂದು ತಿಳಿದು ಬಂದಿದೆ.