ಮೈಸೂರು ; ಕ್ರಿಸ್ಮಸ್ ರಜೆ ಸೇರಿ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ವಾರದ ರಜೆ ರದ್ದು ಮಾಡಲಾಗಿದೆ. ಹೀಗಾಗಿ ಮೃಗಾಲಯ ಇಂದು ಸಹ ತೆರೆಯಲಿದೆ. ಪ್ರತಿ ಮಂಗಳವಾರ ಮೃಗಾಲಯಕ್ಕೆ ವಾರದ ರಜೆ ಇರುತ್ತದೆ. ಆದರೆ ಈ ಬಾರಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ವಾರದ ರಜೆ ರದ್ದು ಮಾಡಿ, ಎಂದಿನಂತೆ ಮೃಗಾಲಯ ತೆರೆದಿರಲಿದೆ.
ಸಾಲು ಸಾಲು ರಜೆ ಕಾರಣದಿಂದಾಗಿ ಮೃಗಾಲಯಕ್ಕೆ ಶನಿವಾರದಿಂದ ಸೋಮವಾರದವರೆಗೆ ದಾಖಲೆ ಸಂಖ್ಯೆಯಲ್ಲಿ ಅಂದರೆ 1.01 ಲಕ್ಷ ಸಂದರ್ಶಕರು ಭೇಟಿ ನೀಡಿದ್ದರು. ಕಳೆದ ವರ್ಷ ಇದೇ ದಿನಗಳಲ್ಲಿ ಒಟ್ಟು 77,833 ಮಂದಿ ಭೇಟಿ ನೀಡಿದ್ದರು.
ಸಂದರ್ಶಕರ ಭೇಟಿ ಅಂಕಿ-ಅಂಶಗಳನ್ನು ನೋಡುವುದಾದರೆ
23 ಡಿಸೆಂಬರ್ ಕಳೆದ ವರ್ಷ 16,682
23 ಡಿಸೆಂಬರ್ ಈ ಬಾರಿ 25,860 ಪ್ರವಾಸಿಗರು ಭೇಟಿ

24 ಡಿಸೆಂಬರ್ ಕಳೆದ ವರ್ಷ
26,355
25 ಡಿಸೆಂಬರ್ ಈ ಬಾರಿ 40,761
25 ಡಿಸೆಂಬರ್ ಕಳೆದ ವರ್ಷ
34,796
25 ಡಿಸೆಂಬರ್ ಈ ಬಾರಿ 35,344
ಒಟ್ಟು ಕಳೆದ ವರ್ಷ
77,833 ಪ್ರವಾಸಿಗರು ಭೇಟಿ ನೀಡಿದ್ದರೆ ಈ ಬಾರಿ 1.01 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಕ್ರಿಸ್‌ಮಸ್ ದಿನವಾದ ಸೋಮವಾರ 35,344 ವೀಕ್ಷಕರು ಭೇಟಿ ನೀಡಿದ್ದರು. ಭಾನುವಾರ (ಡಿ.24) ದಾಖಲೆಯ 40,761 ಜನ ಬಂದಿದ್ದರು. 2018ರ ಡಿ.24ರಂದು 40,675 ಸಂದರ್ಶಕರು ಭೇಟಿ ನೀಡಿದ್ದರು ಎಂದು ಮೃಗಾಲಯ ಪ್ರಾಧಿಕಾರದ ಸಿಬ್ಬಂದಿ ಮಾಹಿತಿ ನೀಡಿದ್ದರು.