Top Newsಸಿನಿಮಾ

ಹಿಂದಿಗೆ ರಾಜ್ ಬಿ ಶೆಟ್ಟಿ, ಬಾಲಿವುಡ್ ಸಿನಿಮಾ ಒಪ್ಪಿಕೊಳ್ಳಲು ಕಾರಣ ಯಾರು?

ಪ್ರತಿಭಾನ್ವಿತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈಗಾಗಲೇ ಮಲಯಾಳಂ ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ. ಇದೀಗ ಹಿಂದಿ ಚಿತ್ರರಂಗಕ್ಕೂ ಕಾಲಿಡಲು ರಾಜ್ ಬಿ ಶೆಟ್ಟಿ ರೆಡಿಯಾಗಿದ್ದಾರೆ. ಆದರೆ ರಾಜ್ ಬಿ ಶೆಟ್ಟಿ ಹಿಂದಿ ಸಿನಿಮಾದಲ್ಲಿ ಒಪ್ಪಿಕೊಳ್ಳಲು ಆ ಒಬ್ಬ ವ್ಯಕ್ತಿ ಕಾರಣವಂತೆ. ಯಾರದು? ಹಿಂದಿಗೆ ರಾಜ್ ಬಿ ಶೆಟ್ಟಿ, ಬಾಲಿವುಡ್ ಸಿನಿಮಾ ಒಪ್ಪಿಕೊಳ್ಳಲು ಕಾರಣ ಯಾರು?

ರಾಜ್ ಬಿ ಶೆಟ್ಟಿ, ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಹಾಗೂ ನಿರ್ದೇಶಕ. ಪ್ರಸ್ತುತ ಸಕ್ರಿಯವಾಗಿರುವ ಹಲವು ನಟ-ನಿರ್ದೇಶಕರಿಗಿಂತಲೂ ಭಿನ್ನವಾಗಿ ಯೋಚಿಸುವ, ಬದುಕುವ ರಾಜ್ ಬಿ ಶೆಟ್ಟಿ, ಅವರ ಪ್ರತಿಭೆಯಿಂದ ಕನ್ನಡ ಚಿತ್ರರಂಗದ ಗಡಿ ದಾಟಿ ನೆರೆಯ ಚಿತ್ರರಂಗಗಳಲ್ಲಿಯೂ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೆ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮುಟಿ ಅವರೊಟ್ಟಿಗೆ ನಟಿಸಿ ಬಂದಿರುವ ರಾಜ್ ಬಿ ಶೆಟ್ಟಿ ಇದೀಗ ಬಾಲಿವುಡ್​ಗೆ ಕಾಲಿಡಲು ಸಜ್ಜಾಗಿದ್ದಾರೆ.

ರಾಜ್ ಬಿ ಶೆಟ್ಟಿ, ಹಿಂದಿ ಸಿನಿಮಾ ಒಂದರಲ್ಲಿ ನಟಿಸಿವುದು ಖಾತ್ರಿಯಾಗಿದೆ. ಸಿನಿಮಾವನ್ನು ಬಾಲಿವುಡ್​ನ ಖ್ಯಾತ ಹಾಗೂ ಭಿನ್ನ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನ ಮಾಡುತ್ತಿದ್ದಾರೆ. ಕೇವಲ ಅನುರಾಗ್ ಕಶ್ಯಪ್ ಅವರಿಗಾಗಿ ಮಾತ್ರವೇ ತಾವು ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿ ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ‘ನಾನು ಅನುರಾಗ್ ಕಶ್ಯಪ್ ಅವರ ದೊಡ್ಡ ಅಭಿಮಾನಿ. ನಾನು ಸಿನಿಮಾ ನಿರ್ದೇಶಕ ಆಗಬೇಕು ಎಂದುಕೊಳ್ಳಲು ಅವರ ಸಿನಿಮಾಗಳು ಬೀರಿದ ಪ್ರಭಾವವೂ ಸಾಕಷ್ಟಿದೆ. ಅವರು ಕೆಲಸ ನನ್ನಲ್ಲಿ ಸ್ಪೂರ್ತಿ ತುಂಬಿದೆ. ನಾನು ನನ್ನ ತಂತ್ರಜ್ಞರೊಟ್ಟಿಗೆ ಹಲವು ಬಾರಿ ಕಶ್ಯಪ್​ರ ಸಿನಿಮಾಗಳ ಬಗ್ಗೆ ಚರ್ಚೆ ಮಾಡಿದ್ದಿದೆ’ ಎಂದಿದ್ದಾರೆ ರಾಜ್ ಬಿ ಶೆಟ್ಟಿ

Comments (0)

Your email address will not be published. Required fields are marked *

Back to top button