Top Newsರಾಜ್ಯಸುದ್ದಿ

ಇಂದು ಶ್ರೀರಂಗಪಟ್ಟಣದಲ್ಲಿ ಮೊಳಗಲಿದೆ ಹನುಮನಾಮ ಭಜನೆ; 5 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

ಮಂಡ್ಯ : ಇಂದು ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ನಡೆಯುತ್ತಿರುವ ಹಿನ್ನೆಲೆ ಶ್ರೀರಂಗಪಟ್ಟಣದಲ್ಲಿ ಕೇಸರಿ ಬಂಟಿಂಗ್ಸ್ ಮತ್ತು ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಯಾತ್ರೆ ಸಾಗುವ ಪಟ್ಟಣದ ಮುಖ್ಯ ಬೀದಿಗೆ ಕೇಸರಿ ಬಂಟಿಂಗ್ಸ್ ಹಾಕಿ ಅಲಂಕಾರ ಮಾಡಲಾಗಿದೆ. ಈ ಸಂಕೀರ್ತನಾ ಯಾತ್ರೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಭಾಗಿಯಾಗಿದ್ದಾರೆ.

ಈ ಸಂಕೀರ್ತನಾ ಯಾತ್ರೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಗಂಜಾಮ್​ನ ಹನುಮ ದೇಗುಲದಿಂದ ರಂಗನಾಥ ದೇಗುಲದವರೆಗೂ 5 ಕಿಲೋ ಮೀಟ್​ ಮಾರ್ಗದಲ್ಲಿ ಸಂಕೀರ್ತನಾ ಯಾತ್ರೆ ನಡೆಯಲಿದೆ.

ಪೊಲೀಸರ ಭದ್ರತೆಯಲ್ಲಿ ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆ

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಂಕೀರ್ತನ ಯಾತ್ರೆಗೆ ಪೊಲೀಸರ ಬಿಗಿ ಭದ್ರತೆ ವಹಿಸಿದ್ದಾರೆ. ಪೊಲೀಸರ ಭದ್ರತೆಯಲ್ಲಿ ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಡೆಯುತ್ತದೆ. ಪೊಲೀಸ್ ಇಲಾಖೆ ಹನುಮ ಮಾಲಾಧಾರಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಇನ್ನು ಪಟ್ಟಣ ಮೂಡಲಬಾಗಿಲು ಆಂಜನೇಯ ದೇಗುಲ ಪುನರ್​ನಿರ್ಮಾಣ ಮಾಡುವುದು ಈ ಯಾತ್ರೆಯ ಸಂಕಲ್ಪವಾಗಿದ್ದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಕಡೆ ಬಂದೋಬಸ್ತ್​ ಮಾಡಿಕೊಂಡಿದೆ. ಎಲ್ಲೆಡೆಯೂ ಹೈ ಅಲರ್ಟ್​​ ಇದ್ದು. ಯಾತ್ರೆ ಸಾಗುವ ದಾರಿಯುದ್ದಕ್ಕೂ ಸುಮಾರು 100 ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗಿದೆ. ಕೆಎಸ್​​ಆರ್​ಪಿ, ಡಿಎಆರ್ ಸೇರಿ ಒಟ್ಟು ಒಂದೂವರೆ ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button