ಮದ್ದೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ 11ನೇ ದಿನದ ಭೂಶಾಂತಿ ಉತ್ತರ ಕ್ರಿಯಾದಿ ಕಾರ್ಯವು ಇಂದು ನಡೆಯಲಿದೆ. ವೈಕುಂಠ ಸಮಾರಾಧಾನೆ ಕಾರ್ಯದಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟದ ಸದಸ್ಯರು, ಶಾಸಕರು, ಮಾಜಿ ಶಾಸಕರು ಹಾಗೂ ಕುಟುಂಬ ಸದಸ್ಯರೊಟ್ಟಿಗೆ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಪಾಲ್ಗೊಳ್ಳಲಿದ್ದು, ಅಗತ್ಯ ಬಂದೋಬಸ್ತ್ ಸೇರಿದಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ. ಈ ಸಂಬಂಧ ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಹಾಗೂ ಶಾಸಕ ಕೆ.ಎಂ. ಉದಯ್ ಪೂರ್ವ ಸಿದ್ದತೆ ಕುರಿತು ಕಾಫಿ ಡೇ ಸಮೀಪದ ಕೃಷ್ಣರ ಸಮಾಧಿ ಬಳಿಗೆ ಪರಿಶೀಲಿಸಿದರು. ಒಕ್ಕಲಿಗ ಸಂಪ್ರದಾಯದಂತೆ ನಡೆಯುವ ದಿನದ ವಿಧಿ ವಿಧಾನಗಳ ವೇಳೆ ಗೀತ ನಮನ, ಗಣ್ಯರಿಂದ ಪುಷ್ಪನಮನ, ಮತ್ತಿತರ ಕಾರ್ಯಕ್ರಮಗಳು ನಿಯೋಜನೆಗೊಂಡಿದೆ.