ಅಮರಾವತಿ : ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಬಂದಿದ್ದ ಚಿನ್ನವನ್ನು ಕದ್ದಿದ್ದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಟಿಟಿಡಿ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀವರಿ ಪರಕಾಮಣಿಯ ಸಂಗ್ರಹಾಲಯದಿಂದ ಚಿನ್ನವನ್ನು ಕದಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ತಿರುಮಲ ದೇವಸ್ಥಾನದಲ್ಲಿ ಟಿಟಿಡಿಯಲ್ಲಿರುವ ದೇಣಿಗೆ ಪೆಟ್ಟಿಗೆಯಾದ ‘ಶ್ರೀವರಿ ಹುಂಡಿ’ಯಲ್ಲಿ ಕಾಣಿಕೆಗಳನ್ನು ವಿಂಗಡಿಸಲು ಮತ್ತು ಎಣಿಸಲು ಟಿಟಿಡಿಗೆ ಸಿಬ್ಬಂದಿಯನ್ನು ಪೂರೈಸುವ ಹೊರಗುತ್ತಿಗೆ ಸಂಸ್ಥೆ ‘ಅಗ್ರಿಗೋಸ್’. ಇದರ ನೌಕರ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.
ಕಳೆದ ಒಂದು ವರ್ಷದಲ್ಲಿ 10 ರಿಂದ 15 ಬಾರಿ ಬಿಸ್ಕೆಟ್ ಮತ್ತು ಆಭರಣಗಳ ರೂಪದಲ್ಲಿ 46 ಲಕ್ಷ ರೂಪಾಯಿ ಮೌಲ್ಯದ 650 ಗ್ರಾಂ ಚಿನ್ನವನ್ನು ಕದ್ದ ಆರೋಪದ ಮೇಲೆ ವಿ ಪೆಂಚಲಯ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪರಾಕಮಣಿಯಲ್ಲಿ ಕೆಲಸ ಮಾಡುತ್ತಿದ್ದ ಪೆಂಚಲಯ್ಯ ಎಂಬುವರು ವಾಹನಕ್ಕೆ ಜಾರಿಸಿ ಚಿನ್ನದ ಬಿಸ್ಕತ್ ಕದಿಯಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಜ.12ರಂದು ಬಂಧಿಸಿ ಸೋಮವಾರ ರಿಮಾಂಡ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.