ಜೈಪುರ : ಟೈರ್ಗೆ ಗಾಳಿ ತುಂಬಿಸುವಾಗ ಸಿಡಿದು ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅಜ್ಮೀರ್‌ನ ರೂಪಂಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಂಕ್ಚರ್ ಹಾಕಿದ ಬಳಿಕ ಚಾಲಕ ಸ್ವತಃ ಗಾಳಿ ತುಂಬಿಸಲು ಮುಂದಾಗಿದ್ದಾರೆ. ಈ ವೇಳೆ ಟೈರ್ ಬ್ಲಾಸ್ಟ್ ಆಗಿ ಬಸ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತಪಟ್ಟ ಚಾಲಕನನ್ನು 50 ವರ್ಷದ ಬೋದುರಾಮ್ ಎಂದು ಗುರುತಿಸಲಾಗಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನ ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ.
15 ಎತ್ತರಕ್ಕೆ ಹಾಕಿ ಬಿದ್ದು ಸಾವು
ಅಪಘಾತದ ಬಗ್ಗೆ ಮಾಹಿತಿ ಪಡೆದ ರೂಪಂಗಢ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಮೃತ ಬೋದುರಾಮ್ ಅವರ ಕಿರಿಯ ಸಹೋದರ ಮದನ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಸೋಮವಾರ ಬೆಳಿಗ್ಗೆ 11:30 ಕ್ಕೆ ಬಸ್‌ನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಬೋದುರಾಮ್ ಸೂರತ್‌ನಿಂದ ಹೊರಟಿದ್ದರು. ಇಂದು ಮಂಗಳವಾರ ಬೆಳಗ್ಗೆ 7:00 ಗಂಟೆ ಸುಮಾರಿಗೆ ಬಸ್‌ನ ಹಿಂಬದಿಯ ಟೈರ್ ಪಂಕ್ಚರ್ ಆಗಿತ್ತು. ಟೈರ್ ಪಂಕ್ಚರ್ ಹಾಕಿಸಲು ಚಾಲಕ ರೂಪಂಗಢ್‌ನ ಪರ್ಬತ್‌ಸರ್ ಮಾರ್ಗ್‌ನಲ್ಲಿರುವ ಗುಜರಾತ್ ಹೋಟೆಲ್ ಬಳಿ ನಿಲ್ಲಿಸಿದ್ದಾರೆ. ಈ ವೇಳೆ ಪಂಕ್ಚರ್ ಹಾಕಿಸಿ ಗಾಳಿತುಂಬಿಸುವಾಗ ಟೈರ್ ಸಿಡಿದಿದೆ. ಟೈರ್ ಸಿಡಿದ ರಬಸಕ್ಕೆ ಬೋದುರಾಮ್ 15 ಅಡಿ ಎತ್ತರಕ್ಕೆ ಜಿಗಿದು ನೆಲದ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಟೈರ್ ಸಿಡಿದ ಶಬ್ಧ ಸುಮಾರು ಒಂದು ಕಿಲೋ ಮೀಟರ್ವರೆಗೆ ಪ್ರತಿಧ್ವನಿಸಿದತು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿದ್ದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ರೂಪನಗರ ಪೊಲೀಸ್ ಠಾಣೆಯ ಎಎಸ್‌ಐ ಗೋಪಾರಾಮ್ ಪಂಚನಾಮೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತವು ಎಷ್ಟು ಭೀಕರವಾಗಿದೆಯೆಂದರೆ ಸ್ಥಳದಲ್ಲಿದ್ದವಲ್ಲಿ ಕೆಲವರೂ ಪ್ರಜ್ಞೆ ತಪ್ಪಿದ್ದರೆಂದು ತಿಳಿದುಬಂದಿದೆ. ಟೈರ್ ಬ್ಲಾಸ್ಟ್ ಆಗಿ ಮೃತನ ಎದೆಗೆ ಬಲವಾಗಿ ಬಡಿದ ಕಾರಣ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.