ವಾಷಿಂಗ್ಟನ್ : ವಿಶ್ವದ ಅತ್ಯಂತ ಜನಪ್ರಿಯ ಆ್ಯಪ್ ಆದ ಟಿಕ್‌ಟಾಕ್ ಜ.20ರಿಂದ ಅಮೆರಿಕದಲ್ಲಿ ತನ್ನ ಸೇನೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಅಮೆರಿಕದಲ್ಲಿ ತನ್ನ ಕಾರ್ಯಾಚರಣೆ ಮುಂದುವರೆಸಲು ಚೀನಾ ಮೂಲದ ಬೈಟ್‌ಡ್ಯಾನ್ಸ್ ಒಡೆತನದ ಕಂಪನಿ ತನ್ನೆಲ್ಲೇ ಪ್ರಯತ್ನಗಳನ್ನು ಮುಂದುವರೆಸಿದೆ.
ಒಂದು ವೇಳೆ ಹಾಲಿ ಬೈಡೆನ್ ಆಡಳಿತ ಅಥವಾ ಜ.20ರಿಂದ ಅಧಿಕಾರಕ್ಕೆ ಬರುವ ಟ್ರಂಪ್ ಆಡಳಿತ ನಿಷೇಧ ಹಿಂಪಡೆಯಲು ಮುಂದಾಗದೇ ಇದ್ದರೆ ಅಮೆರಿಕದ 17 ಕೋಟಿ ಟಿಕ್‌ಟ್ಯಾಕ್ ಬಳಕೆದಾರರು ಶೀಘ್ರವೇ ಆ್ಯಪ್‌ನಿಂದ ದೂರವಾಗುವುದು ಅನಿವಾರ್ಯ
“170 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ನರಿಗೆ, ಟಿಕ್ಟಾಕ್ ಅಭಿವ್ಯಕ್ತಿ, ತೊಡಗಿಸಿಕೊಳ್ಳುವಿಕೆಯ ಸಾಧನಗಳು ಮತ್ತು ಸಮುದಾಯದ ಮೂಲಕ್ಕಾಗಿ ವಿಶಿಷ್ಟ ಮತ್ತು ವಿಸ್ತಾರವಾದ ಔಟ್ಲೆಟ್ ಅನ್ನು ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಟಿಕ್ಟಾಕ್ನ ಡೇಟಾ ಸಂಗ್ರಹಣೆ ಅಭ್ಯಾಸಗಳು ಮತ್ತು ವಿದೇಶಿ ಎದುರಾಳಿಯೊಂದಿಗಿನ ಸಂಬಂಧಕ್ಕೆ ಸಂಬಂಧಿಸಿದಂತೆ ತನ್ನ ಬೆಂಬಲಿತ ರಾಷ್ಟ್ರೀಯ ಭದ್ರತಾ ಕಾಳಜಿಗಳನ್ನು ಪರಿಹರಿಸಲು ಹಿಂತೆಗೆದುಕೊಳ್ಳುವುದು ಅಗತ್ಯ ಎಂದು ಕಾಂಗ್ರೆಸ್ ನಿರ್ಧರಿಸಿದೆ” ಎಂದು ನ್ಯಾಯಾಲಯ ಹೇಳಿದೆ.
ಪ್ರಶ್ನಿಸಲಾದ ನಿಬಂಧನೆಗಳು ಅರ್ಜಿದಾರರ ಮೊದಲ ತಿದ್ದುಪಡಿ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ನಾವು ತೀರ್ಮಾನಿಸುತ್ತೇವೆ” ಎಂದು ನ್ಯಾಯಾಲಯ ಹೇಳಿದೆ.
ಈ ನಡುವೆ ನಿಷೇಧ ಜಾರಿಯನ್ನು ನೂತನ ಅಧ್ಯಕ್ಷ ಟ್ರಂಪ್ ಸರ್ಕಾರಕ್ಕೆ ಬಿಡಲಾಗುವುದು ಎಂದು ಬೈಡನ್ ಸರ್ಕಾರ ತಿಳಿಸಿದೆ. ಅದಕ್ಕೂ ಮೊದಲು ಟಿಕ್‌ಟಾಕ್ ಅನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಪ್ರಗತಿಯಾದರೆ ಅದರ ಮೇಲಿನ ನಿರ್ಬಂಧವನ್ನು 90 ದಿನಗಳ ಮಟ್ಟಿಗೆ ತಡೆಹಿಡಿಯಲಾಗುವುದು.
ನಿರ್ಬಂಧ ಜಾರಿಯಾದಂದಿನಿಂದ ಟಿಕ್‌ಟಾಕ್ ಆ್ಯಪನ್ನು ಇನ್ಸ್ಟಾಲ್ ಮಾಡುವುದು ಸಾಧ್ಯವಾಗುವುದಿಲ್ಲ. ಪ್ರಸ್ತುತ ಬಳಸುತ್ತಿರುವವರಿಗೆ ಇದು ಲಭ್ಯವಿರಲಿದೆ. ಆದರೆ ಬಳಿಕ ಅಪ್‌ಡೇಟ್‌ಗಳು ಲಭಿಸುವುದಿಲ್ಲ. ಇದರಿಂದ ಸುರಕ್ಷತೆ ಸಂಬಂಧಿತ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಯಿದೆ.