ಶಿವಮೊಗ್ಗ : ದೇಶದಲ್ಲಿ ಟಿಕ್ ಟಾಕ್ ಬಂದಾಗಿನಿಂದ ತನ್ನ ಅಂದವನ್ನು ತೋರಿಸುತ್ತಾ ರೀಲ್ಸ್ ಮಾಡುತ್ತಿದ್ದ ಹೊಸನಗರದ ಸುಂದರಿ ಸನ್ನಿಧಿಗೆ ಮಲೆನಾಡಿನ ಹುಡುಗರೇ ಟಾರ್ಗೆಟ್ ಆಗಿದ್ದಾರೆ. ತನ್ನ ಸೌಂದರ್ಯದ ಬೆನ್ನುಬಿದ್ದು ಬರುವ ಹುಡುಗರನ್ನು ಪ್ರೀತಿಯ ಬುಟ್ಟಿಗೆ ಬೀಳಿಸಿಕೊಂಡು, ಮದುವೆಯಾಗಿ ಒಂದಷ್ಟು ದಿನ ಸಂಸಾರವನ್ನೂ ಮಾಡಿ ನಂತರ ದುಡ್ಡಿನ ಸಮೇತ ಪರಾರಿ ಆಗುತ್ತಾಳೆ. ಈಕೆಯ ಅಭ್ಯಾಸಕ್ಕೆ ಲವ್.. ಸೆಕ್ಸ್.. ಔರ್ ದೋಖಾ ಎಂದೂ ಹೇಳಬಹುದೇನೋ..!

ಶಿವಮೊಗ್ಗದಲ್ಲಿ ಲವ್ ಹಾಗೂ ಮ್ಯಾರೇಜ್ ದೋಖಾ ನಡೆದಿದೆ. ಹಣಕ್ಕಾಗಿ ಮದುವೆಯಾಗೋದು ಇವಳ ಖಯಾಲಿಯಾಗಿದೆ. ಸೌಂದರ್ಯವತಿಯ ಹಿಂದೆ ಹೋಗುವ ಮಲೆನಾಡಿನ ಯುವಕರೇ ಎಚ್ಚರವಾಗಿರಿ ಎಂಬ ಸಂದೇಶ ನೀಡಲಾಗುತ್ತಿದೆ. ಹೌದು, ಹೀಗೆ ಮಲೆನಾಡಿನ ಯುವಕರಿಗೆ ಎಚ್ಚರಿಕೆ ಸಂದೇಶ ನೀಡುತ್ತಿರುವುದು ಶಿವಮೊಗ್ಗ ನಗರದ ಸಂಕೇತ್ ಆಗಿದ್ದಾರೆ. ಈತ ಯುವತಿಯಿಂದ ಲವ್, ಸೆಕ್ಸ್, ಮ್ಯಾರೇಜ್ ದೋಖಾಗೆ ಒಳಗಾಗಿ ಬರೋಬ್ಬರಿ 20 ಲಕ್ಷ ರೂ. ಕಳೆದುಕೊಂಡಿದ್ದಾನೆ.

ಇನ್ನು ಮೋಸ ಮಾಡಿದ ಯುವತಿ ಇಲ್ಲಿ ಕಾಣುತ್ತಿರುವ ಅಪ್ಪಟ ಸುಂದರಿ ಸನ್ನಿಧಿ ಎಚ್.ವೈ. ಈಕೆ ಮೂಲತಃ ಮಲೆನಾಡಿದ ಹೊಸನಗರ ತಾಲೂಕಿನ ನಗರ ಸಮೀಪದ ಹೆಂಡೆಗದ್ದೆ ಗ್ರಾಮದ ಯುವತಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಸನ್ನಿಧಿಗೆ ಪ್ರೀತಿಸಿ ಮದುವೆಯಾಗುವುದಾಗಿ ನಾಟಕವಾಡಿ ಮೋಸ ಮಾಡುವುದು ಖಯಾಲಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಹರಿಬಿಟ್ಟು ತನ್ನ ಸೌಂದರ್ಯಕ್ಕೆ ಮೋಹಗೊಂಡ ಯವಕರಿಗೆ ಪ್ರೀತಿಯ ಬಲೆ ಬೀಸುತ್ತಾಳೆ.

ನಂತರ, ಪ್ರೀತಿಸಿ, ಮದುವೆಯಾಗುವ ಟಿಕ್ ಟಾಕ್ ಸುಂದರಿ ಸನ್ನಿಧಿ, ಅದೇ ಕ್ಷಣಗಳಲ್ಲಿ ಮತ್ತೊಬ್ಬರೊಂದಿಗೂ ಸಂಬಂಧವನ್ನು ಹೊಂದಿರುತ್ತಾಳೆ. ಮದುವೆಯಾದ ಗಂಡನೊಂದಿಗೆ ಸ್ವಲ್ಪ ಹೊಂದಾಣಿಕೆ ತಪ್ಪಿದರೂ ಅಲ್ಲಿಂದ ಜೂಟ್ ಆಗುತ್ತಾಳೆ. ಸಂಕೇತ್ ಎಂಬ ಯುವಕನೊಂದಿಗೆ ಸುಂದರಿ ಸನ್ನಿಧಿ ಕಳೆದ ವರ್ಷ ಫೆಬ್ರವರಿ ಯಲ್ಲಿ ಮದುವೆಯಾಗಿದ್ದಳು. ಒಂದೆರಡು ತಿಂಗಳ ಸಂಸಾರ ಮಾಡಿ ಕೈಕೊಟ್ಟು ಹೋಗಿದ್ದಾಳೆ.

ಅಷ್ಟಕ್ಕೂ ಪ್ರೀತಿಸಿ ಮದುವೆಯಾಗಿ, ಕೆಲವು ತಿಂಗಳು ಒಟ್ಟಿಗೆ ಸಂಸಾರ ಸುಖವನ್ನೂ ಅನುಭವಿಸಿದ ಈಕೆಗೆ, ಈಗ ಗಂಡ ಕೀಳು ಜಾತಿಯವನಾಗಿ ಕಾಣಿಸಿದ್ದಾನೆ. ತನ್ನಿಂದ ಆಗಿಂದಾಗ್ಗೆ ಹಣ ಕಿತ್ತುಕೊಂಡ ಈಕೆಗೆ, ಈಗ ಹಣ ಕೊಡದ ಕಾರಣ ಹೀಯಾಳಿಸಿ ಮತ್ತೊಬ್ಬ ಯುವಕನೊಂದಿಗೆ ಓಡಾಟ ಆರಂಭಿಸಿದ್ದಾಳೆ. ರೀಲ್ಸ್ ಸುಂದರಿ ಸನ್ನಿಧಿ ಈ ಹಿಂದೆಯೂ ಕಡೂರು ಮೂಲದ ಯುವಕನ ಜೊತೆ ಮದುವೆಯಾಗಿದ್ದು, ಆತನಿಗೂ ಕೈ ಕೊಟ್ಟು ಸಂಕೇತ್‌ನನ್ನು ಪ್ರೀತಿಸಿ ಮದುವೆಯಾಗಿದ್ದಳು.

ತನ್ನ ಸೌಂದರ್ಯವನ್ನು ನೋಡಿ ಹಿಂದೆ ಬೀಳುವ ಹುಡುಗರನ್ನು ಲವ್‌ ಮಾಡಿ ಹಣ ಪೀಕಿಕೊಳ್ಳೋದು ಇವಳ ಚಾಳಿಯಾಗಿದೆ. ಈಕೆ ಮಲೆನಾಡಿನ ಭಾಗದ ಖತರ್ನಾಕ್ ಯುವತಿಯಾಗಿದ್ದಾಳೆ ಎಂದು ಸಂಕೇತ್ ಎಚ್ಚರಿಕೆ ನೀಡಿದ್ದಾನೆ. ಇನ್ನು ಸಂಕೇತ್ ಕಳೆದ ನವಂಬರ್ ತಿಂಗಳಿನಲ್ಲಿ ಸನ್ನಿಧಿ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈಕೆಯ ಸೌಂದರ್ಯಕ್ಕೆ ಮಾರುಹೋಗುವ ಮುನ್ನ ಹುಷಾರಾಗಿರಿ ಎನ್ನುವುದೇ ಈ ಸ್ಟೋರಿಯ ಸಂದೇಶ.

By admin

Leave a Reply

Your email address will not be published. Required fields are marked *

Verified by MonsterInsights