ಕಾಂಗ್ರೆಸ್ ಮುಖಂಡ, ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಬಿ. ಕೆ. ಅಲ್ತಾಫ್ ಅವರಿಗೆ ಅಪರಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಈ ಸಂಬಂಧ ಅಲ್ತಾಫ್ ಅವರು ಜೆ.ಜೆ.ನಗರ ಪೋಲಿಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.
ಪಿಎಫ್ಐ ಸಂಘಟನೆಯವರೊಂದಿಗೆ ಆಟವಾಡಬೇಡ, ಆರ್ಎಸ್ಎಸ್ ಏಜೆಂಟ್ ಆಗಿ ಕೆಲಸ ಮಾಡಬೇಡ. ನಾಳೆ ನಿನ್ನ ಮಗಳ ಮದುವೆ ಇದೆ. ನಮ್ಮಿಂದ ನೀನು ಹಲವು ಬಾರಿ ಬಚಾವ್ ಆಗಿದ್ದೀಯಾ. ಇನ್ಮುಂದೆ ನೀನು ಬಚಾವ್ ಆಗಲು ಆಗಲ್ಲ. ನಿನ್ನ ತಮ್ಮಂದಿರನ್ನು ನೀನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿನ್ನ ಮತ್ತು ನಿನ್ನ ಕುಟುಂಬದವರನ್ನು ಜೀವ ಸಹಿತ ಬಿಡುವುದಿಲ್ಲ. ನೀನು ನ್ಯಾಯಾಲಯದಲ್ಲಿ ಕೇಸ್ಗೆ ಸಾಕ್ಷಿ ಹೇಳಲು ಹೋಗಬಾರದು. ಹೋದರೇ ನೀನು ಉಳಿಯುವುದಿಲ್ಲ. ಆರ್ಎಸ್ಎಸ್ಗೆ ಚಮಚಗಿರಿ ಮಾಡಿದರೆ ಪಿಎಫ್ಐ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ. ಅಪರಿಚಿತ ವ್ಯಕ್ತಿ ಫೆಬ್ರವರಿ 5ರಂದು ರಾತ್ರಿ 8 ಗಂಟೆ ಸುಮಾರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ
ಸದ್ಯ ಪ್ರಕರಣ ಜೆ.ಜೆ.ನಗರ ಠಾಣೆಯಿಂದ ಸಿಸಿಬಿಗೆ ವರ್ಗಾವಣೆಯಾಗಿದ್ದು ತನಿಖೆ ನಡೆಸಲಾಗುತ್ತಿದೆ


