Wednesday, July 2, 2025
23.2 C
Bengaluru
Google search engine
LIVE
ಮನೆಧರ್ಮಕನಸ್ಸಲ್ಲಿ ಇದನ್ನು ಕಂಡ್ರೆ ನಿಮ್ಮ ಜೀವನವೇ ಬದಲು

ಕನಸ್ಸಲ್ಲಿ ಇದನ್ನು ಕಂಡ್ರೆ ನಿಮ್ಮ ಜೀವನವೇ ಬದಲು

ಕನಸ್ಸುಗಳು ಎಲ್ಲರಿಗೂ ಬೀಳುತ್ತೆ.. ಆ ಕನಸ್ಸುಗಳಿಗೂ ಒಂದೊಂದು ಅರ್ಥ ಇರುತ್ತೆ.. ನಮ್ಮ ಕನಸ್ಸಲ್ಲಿ ಕಂಡಂತ ವಸ್ತುಗಳಿಗೂ ಒಂದೊಂದು ಅರ್ಥ ಇರುತ್ತೆ… ಈ ಕನಸಿನ ಮೂಲಕ ನಾವು ನಮ್ಮ ಭವಿಷ್ಯವನ್ನ ತಿಳಿದುಕೊಳ್ಳಬಹುದಂತೆ. ಕನಸುಗಳು ನಮ್ಮ ಜೀವನದಲ್ಲಿ ಮುಂದೆ ಏನಾಗಬಹುದು ಎಂಬುದನ್ನ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

ಕನಸಿನಲ್ಲಿ ಅಳುವುದು ಒಂದು ಪ್ರಮುಖ ಲಕ್ಷಣವಾಗಿದೆ, ಇದು ನಿಮ್ಮ ಜೀವನದಲ್ಲಿನ ಬದಲಾವಣೆಗಳು ಮತ್ತು ಘಟನೆಗಳನ್ನು ಸೂಚಿಸುತ್ತದೆ. ಕನಸಿನಲ್ಲಿ ನೀವು ಏಕಾಂಗಿಯಾಗಿ ಮತ್ತು ಜೋರಾಗಿ ಅಳುವುದನ್ನು ನೋಡಿದರೆ, ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.

ನಾವು ರಾತ್ರಿ ನಿದ್ದೆ ಮಾಡಿದಾಗ, ಕುಟುಂಬದ ಯಾರಾದರೂ ಸತ್ತಿರುವ ಕನಸು ಕಾಣುತ್ತೇವೆ. ಆದರೆ ನಿಜ ಜೀವನದಲ್ಲಿ ಈ ಕನಸು ಅಶುಭವಲ್ಲ. ಸ್ವಪ್ನ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಸತ್ತಿರುವುದನ್ನು ಅಥವಾ ಕನಸಿನಲ್ಲಿ ಯಾರೊಬ್ಬರ ಸಾವನ್ನು ನೋಡುವುದು ಒಳ್ಳೆಯ ಸಂಕೇತವಾಗಿದೆ. ಇದರರ್ಥ ನಿಮ್ಮ ಆಯಸ್ಸು ಹೆಚ್ಚಾಗಲಿದೆ. ಇದಲ್ಲದೆ, ನಿಮ್ಮ ಕನಸಿನಲ್ಲಿ ನಿಮ್ಮ ಆಪ್ತರು ಯಾರಾದರೂ ಸತ್ತಿರುವುದನ್ನು ನೀವು ನೋಡಿದರೆ, ಅದು ಅವರ ಆಯುಷ್ಯ ಹೆಚ್ಚಿದೆ ಎಂದು ಸಂಕೇತವಾಗಿದೆ..

ಕನಸಿನಲ್ಲಿ ಮಲವನ್ನು ನೋಡುವುದು ಕೂಡ ಶುಭ ಸಂಕೇತವಂತೆ. ಈ ಕನಸಿನ ಅರ್ಥವೇನೆಂದರೆ, ನೀವು ಹಣದ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದು ಶೀಘ್ರದಲ್ಲೇ ಪರಿಹಾರವಾಗುವುದು ಎಂಬದಾಗಿದೆ. ಅಲ್ಲದೆ, ಮನೆಯ ಆರ್ಥಿಕ ಸ್ಥಿತಿ ಸುಧಾರಿಸಬಹುದು ಈ ಕನಸು ಮುಂದಿನ ದಿನಗಳಲ್ಲಿ ನಿಮ್ಮ ಅದೃಷ್ಟ ಬದಲಾಯಿಸಬಹುದು..

ಕನಸಿನಲ್ಲಿ ಸ್ಮಶಾನದ ಸ್ಥಳವನ್ನು ನೋಡಿ ಭಯದಿಂದ ಎಚ್ಚೆತ್ತುಕೊಳ್ಳುತ್ತೇವೆ. ಈ ಭಯಾನಕ ಕನಸು ನಿಜ ಜೀವನದಲ್ಲಿ ನಮಗೆ ಬಹಳ ಶುಭ ಫಲಿತಾಂಶಗಳನ್ನು ನೀಡುತ್ತದೆ. ಕನಸಿನಲ್ಲಿ ಸ್ಮಶಾನವನ್ನು ನೋಡುವುದು ಶುಭ ಸಂಕೇತ ಎಂದು ನಂಬಲಾಗಿದೆ. ಇದರರ್ಥ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಅಲ್ಲದೆ, ಈ ಕನಸು ಗೌರವ ಮತ್ತು ಪ್ರತಿಷ್ಠೆಯ ಹೆಚ್ಚಳವನ್ನು ಸೂಚಿಸುತ್ತದೆ.

ಕೆಲವೊಮ್ಮೆ ನಾವು ನಮ್ಮೊಂದಿಗೆ ಇಲ್ಲದವರ ಬಗ್ಗೆ ಕನಸು ಕಾಣುತ್ತೇವೆ. ಅಂದರೆ ಸತ್ತು ಹೋಗಿರುವ ವ್ಯಕ್ತಿಯನ್ನ ಕನಸ್ಸಿನಲ್ಲಿ ಕಾಣೋದು ಕೂಡ ಒಳ್ಳೇದಂತೆ.. ಕನಸಿನಲ್ಲಿ ಸತ್ತ ವ್ಯಕ್ತಿಯೊಂದಿಗೆ ಊಟ ಮಾಡೋದು ಬಂದ್ರೂ ಕೂಡ ತುಂಬಾ ಒಳ್ಳೆಯ ಸಂಕೇತ ಎಂದು ನಂಬಲಾಗಿದೆ. ಇದರರ್ಥ ನೀವು ದೀರ್ಘಕಾಲದವರೆಗೆ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದರಿಂದ ಪರಿಹಾರ ಪಡೆಯುವಿರಿ.

ಇನ್ನು ಆತ್ಮಹತ್ಯೆಯ ಕನಸು ಕೂಡ ಶುಭವಂತೆ.. ಕನಸ್ಸಿನಲ್ಲಿ ತಮ್ಮ ಜೀವತೆಗೆದುಕೊಳ್ಳೋದನ್ನ ಕಂಡರೆ ಅದು ಶುಭ ಎಂದು ಪರಿಗಣಿಸಲಾಗಿದೆ.. ಈ ರೀತಿ ಕನಸ್ಸಲ್ಲಿ ಕಂಡರೆ ನಿಮ್ಮ ಆಯಸ್ಸು ಹೆಚ್ಚಾಗಲಿದೆ ಎಂದರ್ಥ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments