Freedom TV

ಇದು ಲೋಕಲ್ ಚುನಾವಣೆ ಅಲ್ಲ – ಅಣ್ಣಾಮಲೈ ಕಿಡಿ

ಶಿವಮೊಗ್ಗ: ಮೋದಿ ಅವರಿಗೆ ಯಾವಾಗಲೂ ಬೆಂಬಲ ಕೊಡುವ ರಾಜ್ಯ ಕರ್ನಾಟಕ, ಕರ್ನಾಟಕ ಈ ಬಾರಿ ಸ್ಪೀಪ್ ಆಗಲಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಘವೇಂದ್ರ ಒಳ್ಳೆಯ ಕೆಲಸ ಮಾಡಿದ್ದಾರೆ. ಒಳ್ಳೆಯ ಅಂತರದಲ್ಲಿ ಗೆಲ್ಲುತ್ತಾರೆ. ಪ್ರಧಾನಮಂತ್ರಿ ಯಾರಾಗಬೇಕು ಎಂಬುದು ಜನರಿಗೆ ಗೊತ್ತಿದೆ. ವಿಪಕ್ಷಗಳಿಗೆ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಅಂತಾ ಘೋಷಣೆ ಮಾಡಲು ಆಗಿಲ್ಲ,ಏನಾದರೂ ಮಾಡಿ ಅಧಿಕಾರ ಪಡೆಯಬೇಕು ಎಂಬುದು ವಿಪಕ್ಷಗಳ ಉದ್ದೇಶ ಎಂದು ಅಣ್ಣಾಮಲೈ ಕಿಡಿಕಾರಿದರು.

ಎನ್ ಡಿಎ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುತ್ತದೆ. ಪ್ರಧಾನಮಂತ್ರಿ ವಿರುದ್ದ ವಿಪಕ್ಷಗಳು ಅಗೌರವ ತೋರುತ್ತಿವೆ ಈ ಎಲ್ಲವನ್ನು ಮಾಧ್ಯಮದಲ್ಲಿ ಜನ ಗಮನಿಸುತ್ತಿದ್ದಾರೆ. ಇದು ಲೋಕಲ್ ಚುನಾವಣೆ ಅಲ್ಲ ಬರ ಪರಿಹಾರವನ್ನು ‌ಕೇಂದ್ರ ಸರಕಾರ ಖಂಡಿತ ಕೊಡ್ತದೆ. ಈ ಹಿಂದೆ ಯುಪಿಎ ಸರಕಾರ ಇದ್ದಾಗ ರಾಜ್ಯ ಸರಕಾರ ಕೇಳಿದಷ್ಟು ಬರ ಪರಿಹಾರ ಕೊಟ್ಟಿಲ್ಲ, ರಾಜ್ಯ ಸರಕಾರ 18,500 ಕೋಟಿ ಕೇಳಿದರೆ. ಕೇಂದ್ರ ಸರಕಾರ ಕೊಟ್ಟಿದ್ದು 1500 ಕೋಟಿ ಎಂದು ಆಕ್ರೋಶ ಹೊರಹಾಕಿದರು.

Comments (0)

Your email address will not be published. Required fields are marked *

Back to top button