ಬೆಂಗಳೂರು: ಈ ಬಾರಿ ಉತ್ತಮ ಮುಂಗಾರು ಮಳೆಯಿಂದಾಗಿ 12 ವರ್ಷಗಳ ಬಳಿಕ ಮತ್ತೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಬೆಂಗಳೂರು ಪಶ್ವಿಮ ಭಾಗಕ್ಕೆ ಸಪ್ಲೈ ಮಾಡಲಾಗಿದ್ದು, ಬೆಂಗಲೂರು ಪಶ್ಚಿಮಕ್ಕೆ 35 ಕಿಮೀ ದೂರದಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯವು 2.5 ಟಿಎಂಸಿ ಅಡಿ ನೀರಿನಿಂದ ತುಂಬಿ ತುಳುಕುತ್ತಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಶೀಘ್ರದಲ್ಲೇ ಜಲಾಶಯದಿಂದ ನೀರು ಪೂರೈಸಲು ಪ್ರಾರಂಭಿಸುತ್ತದೆ.
2012ರಿಂದ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ನಿಲ್ಲಿಸಲಾಗಿತ್ತು. ಆದರೆ ಬೆಂಗಳೂರು ಬೆಳೆದಂತೆ ನೀರಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮತ್ತೆ ನೀರು ಸರಬರಾಜು ಮಾಡಲಾಗಿದೆ. ಬೆಂಗಳೂರಿನ ಪಶ್ಚಿಮ ಭಾಗಗಳಿಗೆ ಸುಮಾರು 50-60 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತದೆ. ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಹೆಗ್ಗನಹಳ್ಳಿ ಟ್ಯಾಂಕ್ ವರೆಗೆ ನೀರು ಪೂರೈಕೆ ಪೂರೈಯಿಸಲಾಗುತ್ತದೆ. ದಶಕಗಳಿಂದ ಜಲಾಶಯಕ್ಕೆ ಹರಿಯುತ್ತಿದ್ದು, ಕೈಗಾರಿಕಾ, ರಾಸಾಯಿನಿಕ ತ್ಯಾಜ್ಯವಾದ ಎಲೆಕ್ಟ್ರೋಪ್ಲೇಟಿಂಗ್ ಈ ಮೊದಲು ಮಿಶ್ರಣ ಆಗುತ್ತಿತ್ತು.ನೀರನ್ನು ಎಷ್ಟೇ ಸಂಸ್ಕರಿಸಿದರು ಅದನ್ನು ಕುಡಿಯಲು ಯೋಗ್ಯವಲ್ಲ ಎಂದು ತಜ್ಜರ ಅಭಿಪ್ರಾಯ ಪಟ್ಟಿದ್ದು, 2015 ರಲ್ಲಿ ಎಂಪ್ರಿ ಸಂಸ್ಥೆಯಿಂದ ವರದಿ ಬಂದಿತ್ತು. ನೀರಿನ ಗುಣಮಟ್ಟ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ವರದಿ ಬಂದ ನಂತರ, ಬೆಂಗಳೂರಿನ ಪಶ್ಚಿಮ ಭಾಗಗಳಿಗೆ ನೀರು ಬಿಡಲಾಗುವುದು ಎಂದು ಹಿರಿಯ BWSSB ಅಧಿಕಾರಿ ಹೇಳಿದರು.

ಜಲಾಶಯದ ಸಂಗ್ರಹ ಸಾಮರ್ಥ್ಯ 3.325 ಟಿಎಂಸಿ ಅಡಿ ಇದ್ದು, ಜೂನ್ 1 ರಂದು 1.8 ಟಿಎಂಸಿ ಅಡಿ ನೀರು ಇತ್ತು. ಆದರೆ 300 ಕೋಟಿ ವೆಚ್ಚದಲ್ಲಿ ಯೋಜನೆ ಕಾಮಗಾರಿ ಮಂಡಳಿ ಮುಗಿಸಿದ್ದು, BWSSBಯಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ಶುದ್ದೀಕರಣ ಕಾರ್ಯ ಕೈಗೊಂಡಿದ್ದಾರೆ. ನೀರಿನಲ್ಲಿರುವ ಕಶ್ಮಲ, ರಾಸಾಯಿನಿಕವನ್ನು ಬೇರ್ಪಡಿಸಿ ಹೊಳೆತ್ತಲು ಎಂಜಿನಿಯರ್ಸ್ ಮುಂದಾಗಿದ್ದಾರೆ. ಜಲಾಶಯದ ಸಂಸ್ಕರಣಾ ಘಟಕ ಪುನಶ್ವೇತನ ಕಾಮಗಾರಿ ಸಂಪೂರ್ಣ ಕಾರ್ಯ ಮುಗಿದ ಬೆನ್ನಲ್ಲೇ ನೀರು ಸರಬರಾಜು ಮಾಡಲಾಗುತ್ತದೆ. ಟಿಜಿ ಹಳ್ಳಿ ಜಲಾಶಯ ಘಟಕದಲ್ಲಿ ನಿತ್ಯ 20ದಶಲಕ್ಷ ನೀರು ಸಂಸ್ಕರಣ ಮಾಡಲಾಗಿದ್ದು, ಹೊಸ ಯಂತ್ರೋಪಕರಣಗಳು ಮತ್ತು 20MLD ಒಳಚರಂಡಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ. ಎತ್ತಿನಹೊಳೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ 1.7ಟಿಎಂಸಿ ನೀರು ಬರಲಿದ್ದು, ಕಾವೇರಿ ನೀರು ಪೂರೈಕೆಗೂ ಮುನ್ನ ತಿಪ್ಪಗೊಂಡನ ಹಳ್ಳಿಯಿಂದ ನಗರಕ್ಕೆ ನೀರು ಪೂರೈಕೆಯಾಗಲಿದೆ.
ಸೆಪ್ಟೆಂಬರ್ 5 ರಿಂದ ಕಾವೇರಿ 5 ನೇ ಹಂತದ ಅಡಿಯಲ್ಲಿ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಯೋಜಿಸಿದ್ದೇವೆ. ಅಷ್ಟರೊಳಗೆ ಟಿಜಿ ಹಳ್ಳಿ ನೀರು ಸರಬರಾಜು ಕೂಡ ಪ್ರಾರಂಭವಾಗಬಹುದು. ಪಶ್ಚಿಮ ಬೆಂಗಳೂರಿನ ಹೆಗ್ಗನಹಳ್ಳಿ ಟ್ಯಾಂಕ್‌ವರೆಗೆ ಟಿಜಿ ಹಳ್ಳಿಯಿಂದ ನೀರು ಸರಬರಾಜು ಮಾಡುವ ಪ್ರಯೋಗಗಳು ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


