ಹುಬ್ಬಳ್ಳಿ: ಲವ್ ಜಿಹಾದ್ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಅವಳಿನಗರದಲ್ಲಿ ಒಂದೇ ವಾರದಲ್ಲಿ ಐದು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂ ಯುವತಿಯನ್ನು ಸೋ ಕಾಲ್ಡ್ ಡಿ.ಕೆ. ಶಿವಕುಮಾರ್ ಬ್ರದರ್ಸ್ ಪರಿವಾರದವರು ಕಿಡ್ನ್ಯಾಪ್ ಮಾಡಿದ್ದಾರೆ. ಮುಸ್ಲಿಂ ಹುಡುಗಿಯರು ಏಕೆ ಹಿಂದೂ ಯುವಕರನ್ನು ಪ್ರೀತಿಸ್ತಿಲ್ಲ. ಕೇವಲ ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರು ಪ್ರೀತಿಸಿ ಲವ್ ಜಿಹಾದ್ ಮಾಡುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿ, ಕುಟುಂಬದ ನೆಮ್ಮದಿ ಕೆಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರೀತಿಯ ನೆಪದಲ್ಲಿ ಮೋಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಇದನ್ನು ವೈಯಕ್ತಿಕ ಪ್ರಕರಣ ಎಂದು ಪರಿಗಣಿಸಬಾರದು.ಎಲ್ಲಾ ಜಿಹಾದ್‌ಗಳ ಬಗ್ಗೆ ತನಿಖೆ ಮಾಡಲು ವಿಶೇಷ ಎಸ್‌ಐಟಿ ರಚಿಸಬೇಕು ಎಂದು ಸಿ.ಟಿ ರವಿ ತಿಳಿಸಿದರು.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com