ರಾಜಕೀಯರಾಜ್ಯಸುದ್ದಿ

“ರಾಜಕೀಯದಲ್ಲಿ ಪೂರ್ಣವಿರಾಮವಿಲ್ಲ”: ನಿವೃತ್ತ ಸಂಸದರಿಗೆ ಪ್ರಧಾನಿ ಮೋದಿ ಭಾವಪೂರ್ಣ ವಿದಾಯ..!

ನವದೆಹಲಿ: ರಾಜ್ಯಸಭೆಯ 37 ಸದಸ್ಯರ ನಿವೃತ್ತಿಯ ಹಿನ್ನೆಲೆಯಲ್ಲಿ ಸದನವು ಇಂದು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ನಿವೃತ್ತರಾಗುತ್ತಿರುವ ಸದಸ್ಯರ ಸೇವೆಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಸಂಸತ್ತನ್ನು ಒಂದು “ಮುಕ್ತ ವಿಶ್ವವಿದ್ಯಾಲಯ” ಎಂದು ಬಣ್ಣಿಸಿದರು.

“ರಾಜಕೀಯದಲ್ಲಿ ಎಂದಿಗೂ ಪೂರ್ಣವಿರಾಮವಿಲ್ಲ. ಸದನದಿಂದ ನಿವೃತ್ತರಾದರೂ, ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿ ಮುಂದುವರಿಯುತ್ತದೆ”. ಹಿರಿಯ ಸದಸ್ಯರ ಚರ್ಚೆಗಳು ಮತ್ತು ಕಾರ್ಯವೈಖರಿ ಹೊಸ ಸಂಸದರಿಗೆ ದಾರಿದೀಪವಾಗಲಿದೆ. ಪಕ್ಷಪಾತಗಳನ್ನು ಮೀರಿ ದೇಶದ ಹಿತಕ್ಕಾಗಿ ಕೆಲಸ ಮಾಡಿದ್ದನ್ನು ಪ್ರಧಾನಿ ಸ್ಮರಿಸಿದರು. ವಿವಿಧ ಪಕ್ಷಗಳ ಪ್ರಮುಖ ನಾಯಕರು ಸೇರಿದಂತೆ ನಿವೃತ್ತ ಸದಸ್ಯರಿಗೆ ನೆನಪಿನ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ರಾಜ್ಯಸಭೆಯು ಹಿರಿಯರ ಸದನವಾಗಿದ್ದು, ಇಲ್ಲಿನ ಗುಣಮಟ್ಟದ ಚರ್ಚೆಗಳು ಸಮಾಜಕ್ಕೆ ತಲುಪಬೇಕು. ನಿವೃತ್ತ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಈ ಅನುಭವವನ್ನು ಜನರಿಗೆ ತಲುಪಿಸಿ, ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ಪ್ರಧಾನಿ ಆಶಿಸಿದರು. “ಸದನದ ಆಚೆಯೂ ಸದಸ್ಯರು ವಿವಿಧ ಸಾಮರ್ಥ್ಯಗಳಲ್ಲಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತಾರೆ ಎಂಬ ನಂಬಿಕೆ ನನಗಿದೆ.”

Comments (0)

Your email address will not be published. Required fields are marked *

Back to top button