
ಬೆಳಗಾವಿ; ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಸ್ತವಾಡ ಭಾಗದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಡಿಪೋ ಮ್ಯಾನೇಜರ್ ಬರೋವರೆಗೂ ಧರಣಿ ಕೈಬಿಡದಿರಲು ಪಟ್ಟು ಹಿಡಿದಿದ್ದಾರೆ.
ರಾಯಬಾಗ ತಾಲೂಕಿನ ಬಸ್ತವಾಡ ಸಮೀಪ ನಾಲ್ಕೈದು ಹಳ್ಳಿಗಳಿಗೆ ಒಂದೇ ಬಸ್ ವ್ಯವಸ್ಥೆ ಇರುವುದರಿಂದ ಶಾಲಾ ಕಾಲೇಜ್, ಊರು ತಲುಪುವುದು ಕಷ್ಟವೆಂದು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಿದ್ದರೇ ಮುಂದಿನ ದಿನ ಸರ್ಕಾರ ಹಾಗೂ ಸಾರಿಗೆ ಇಲಾಖೆ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಾಲಾಗುವುದೆಂದು ಹೇಳಿದ್ದಾರೆ.

ಎಷ್ಟೋ ಭಾರಿ ಈ ಭಾಗದ ಕಡೆಗಗಳಲ್ಲಿ ಬಸ್ಸು ವ್ಯವಸ್ಥೆ ಇರುವುದಿಲ್ಲ ರಾಯಬಾಗ ತಾಲೂಕಿನ ಬಸ್ತವಾಡ ಸೇರಿದಂತೆ ಅನೇಕ ಸ್ಥಳಗಳಲ್ಲಿ ಇದೇ ರೀತಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇದೊಂದು ಭಾಗ ಮಾತ್ರವಲ್ಲದೇ ಶಕ್ತಿ ಯೋಜನೆಯಲ್ಲಿ ಉಚಿತ ಬಸ್ಸು ವ್ಯವಸ್ಥೆ ಇರುವುದರಿಂದ ವಿದ್ಯಾರ್ಥಿಗಳನ್ನು ಕಂಡೊಡನೆ ಬಸ್ಸು ನಿಲ್ಲಿಸದೇ ಹೋಗುವ ಪ್ರಕರಣಗಳು ಹೆಚ್ಚಾಗ್ತಿದೆ.




