ಬೆಂಗಳೂರು: ಬಿಹಾರ ಚುನಾವಣೆ ವಿಚಾರವಾಗಿ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ಧಾರೆ.. ಬಿಹಾರದಲ್ಲಿ NDA ಅಧಿಕಾರಕ್ಕೆ ಬಂದರೆ ಅದು ನಮ್ಮ ದೇಶದ, ಬಿಹಾರ ಜನರ ದುರಾದೃಷ್ಟ ಅಂತ ಹೇಳಿದ್ದಾರೆ..
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲಾ ಸಮೀಕ್ಷೆಯಲ್ಲಿ NDA ಮುನ್ನಡೆ ಕೊಡಲಾಗಿದೆ. ಒಂದು ವೇಳೆ ಬಿಹಾರದಲ್ಲಿ NDA ಬಂದ್ರೆ ಅದು ನಮ್ಮ ದೇಶದ, ಬಿಹಾರ ಜನರ ದುರಾದೃಷ್ಟ. ಬಿಹಾರದಲ್ಲಿ 20 ವರ್ಷಗಳಿಂದ NDA ಅವರು ಆಡಳಿತ ಮಾಡ್ತಿದ್ದಾರೆ. ಆದರೂ ಬಿಹಾರ ಅಭಿವೃದ್ಧಿ ಆಗಿಲ್ಲ. ಬಿಜೆಪಿ ಬಂದ ಮೇಲೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಜಾಸ್ತಿ ಆಗ್ತಿದೆ. ಕೇಂದ್ರ ಸರ್ಕಾರ ಯಾಕೆ ಗಮನ ಕೊಡ್ತಿಲ್ಲ ಅಂತ ಕಿಡಿಕಾರಿದರು.
ಬಿಹಾರದ ಜನರು ಬೆಂಗಳೂರಿಗೆ ಬಂದು ಕೆಲಸ ಮಾಡ್ತಿದ್ದಾರೆ. ಅಲ್ಲಿ ಕೆಲಸ ಸಿಗದೇ ಇರೋದಕ್ಕೆ ಬರ್ತಿದ್ದಾರೆ. ಇದು ಅಭಿವೃದ್ಧಿ ಅಗ್ತಿಲ್ಲ ಅನ್ನೋದಕ್ಕೆ ಉದಾಹರಣೆ. ಬಿಹಾರ ರಾಜ್ಯ ಅಭಿವೃದ್ಧಿ ಆಗಿಲ್ಲ. ನಿರುದ್ಯೋಗ ಜಾಸ್ತಿ ಆಗಿದೆ. ಒಂದು ವೇಳೆ NDA ಅಧಿಕಾರಕ್ಕೆ ಬಂದ್ರೆ ಅದು ಬಿಹಾರ ಜನರ ದುರಾದೃಷ್ಟ ಅಂತ ಲೇವಡಿ ಮಾಡಿದ್ರು.
ಇನ್ನೂ ಕಾಂಗ್ರೆಸ್ ಸರ್ವನಾಶ ಆಗುತ್ತೆ ಎಂಬ ಮಾಜಿ ಸಚಿವ ರಾಜಣ್ಣ ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ 2028ರಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ನಾವು ಅಭಿವೃದ್ದಿ ಕೆಲಸ ಮಾಡಿದ್ದೇವೆ, ಅದು ನಮಗೆ ಶ್ರೀರಕ್ಷೆ. ಬಿಜೆಪಿ-ಜೆಡಿಎಸ್ ವಿಪಕ್ಷದಲ್ಲಿ ನಾಯಕತ್ವ ಕೊರತೆ ಇದೆ. ಬಿಜೆಪಿ ಸೊರಗಿ ಹೋಗ್ತಿದೆ. ಬಿಜೆಪಿಗೆ ಈಗ ಇರೋ ಸ್ಥಾನವೂ ಮುಂದಿನ ಚುನಾವಣೆಯಲ್ಲಿ ಬರೊಲ್ಲ. ನಮ್ಮ ಪಕ್ಷ 136 ಸ್ಥಾನಕ್ಕಿಂತ ಜಾಸ್ತಿ ಸ್ಥಾನ ಬರ್ತೀವಿ ಎಂದರು. ಇದೇ ವೇಳೆ 2028ಕ್ಕೆ ರಾಮಲಿಂಗಾರೆಡ್ಡಿ ಸಿಎಂ ಸ್ಥಾನದ ಆಕಾಂಕ್ಷಿ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ನಾನು ಯಾವತ್ತೂ ಸಿಎಂ ಆಗೊಲ್ಲ ಎಂದರು.


