ನವದೆಹಲಿ: ಚೀನಾದ ಆಮದುಗಳ ಮೇಲೆ ಅಮೆರಿಕ ಅಧಿಕೃತವಾಗಿ, ಶೇ.104 ರಷ್ಟು ಸುಂಕ ವಿಧಿಸಿದೆ. ಇದು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ ಮತ್ತು ವ್ಯಾಪಕ ಮಾರುಕಟ್ಟೆ ನಡುಕಗಳಿಗೆ ಕಾರಣವಾಗಿದೆ.
ಇಂದಿನಿಂದ ಜಾರಿಗೆ ಬರುವ ಹೊಸ ಸುಂಕ ರಚನೆಯು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಸರಕುಗಳ ಮೇಲಿನ, ಪ್ರತೀಕಾರದ ಶೇ.34ರಷ್ಟು ಸುಂಕವನ್ನು ಹಿಂತೆಗೆದುಕೊಳ್ಳುವಂತೆ, ಬೀಜಿಂಗ್‌ಗೆ ನೀಡಿದ್ದ ಅಂತಿಮ ಸೂಚನೆಯನ್ನು ಅನುಸರಿಸುತ್ತದೆ ಎಂದು ಶ್ವೇತಭವನ ದೃಢಪಡಿಸಿದೆ. ಮಾರ್ಚ್‌ನಲ್ಲಿ ಶೇಕಡ 20ರಷ್ಟು ಸುಂಕ ವಿಧಿಸಲಾಗಿದ್ದು, ಕಳೆದ ವಾರ ಶೇಕಡ 34 ರಷ್ಟು ಮತ್ತು ಈ ವಾರ ಹೆಚ್ಚುವರಿಯಾಗಿ ಶೇಕಡ 50ರಷ್ಟು ಸುಂಕ ವಿಧಿಸಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅಮೇರಿಕಾದ ಅತ್ಯಂತ ಆಕ್ರಮಣಕಾರಿ ವ್ಯಾಪಾರ ಕ್ರಮಗಳಲ್ಲಿ ಒಂದಾಗಿದೆ. ಒಟ್ನಲ್ಲಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹುಚ್ಚಾಟಕ್ಕೆ, ಚೀನಾ ನಿಗಿನಿಗಿ ಕೆಂಡ ಕಾರುತ್ತಿದ್ದು, 3ನೇ ಮಹಾಯುದ್ಧ ನಡೆದು ಬಿಡುತ್ತಾ ಅನ್ನೋ ಅನುಮಾನ ಹುಟ್ಟುಹಾಕಿದೆ.
ಇನ್ನು, ಟ್ರಂಪ್ ಹೆಚ್ಚುವರಿ ಸುಂಕ ವಿಧಿಸಿರುವುದಕ್ಕೆ ಚೀನಾ ಖಡಕ್ ಆಗಿಯೇ ಟಾಂಗ್ ಕೊಟ್ಟಿದೆ. ಪ್ರತೀಕೂಲ ಸನ್ನಿವೇಶ ಎದುರಿಸಲು ನಾವು ರೆಡಿಯಾಗಿದ್ದೇವೆ. ತಕ್ಕ ಪ್ರತಿಕ್ರಿಯೆ ಕೊಡುವುಕ್ಕೆ ಅಗತ್ಯ ಶಸ್ತ್ರಾಸ್ತ್ರ ರೆಡಿ ಇದೆ. ನಾವು ಅಮೇರಿಕಾ ವಿರುದ್ಧ ಕೊನೆಯವರೆಗೂ ಹೋರಾಡಲು ನಾವು ಸಿದ್ಧರಿದ್ದೇವೆ ಅಂತಾ ಚೀನಾ ಹೇಳಿದೆ. ನಿನ್ನೆಯೂ ಕೂಡ ಚೀನಾ ಖಾರವಾಗಿಯೇ ಪ್ರತಿಕ್ರಿಯೆ ನೀಡಿತ್ತು. ಬೆದರಿಕೆ ತಂತ್ರಕ್ಕೆ ಬಗ್ಗಲ್ಲ ಅಂತ್ಯದವರೆಗೂ ಹೋರಾಡುತ್ತೇವೆ. ಅಮೇರಿಕಾ ಬ್ಲ್ಯಾಕ್ಮೇಲೆ ಮಾಡುವ ಸ್ವಭಾವ ತೋರಿಸುತ್ತದೆ. ಇದನ್ನು ಎಂದಿಗೂ ಒಪ್ಪಲ್ಲ.. ಇಂಥಾ ತಂತ್ರಗಳಿಗೆ ಬಗ್ಗಲ್ಲ ಅಂತಾ, ಚೀನಾ ವಾಣಿಜ್ಯ ಸಚಿವಾಲಯ ಪ್ರತಿಕ್ರಿಯಿಸಿತ್ತು.