ಕೊಪ್ಪಳ : ಇಡಿ ಊರಿಗೆ ಊರೇ ರೋಗ ಗ್ರಸ್ತವಾಗಿದೆ. ಗ್ರಾಮದಲ್ಲಿ ಎಲ್ಲರೂ ಮೈ,ಕೈ,ನೋವು ಜ್ವರದಿಂದ ಬಳಲುತಿದ್ದಾರೆ. ದೇವಸ್ಥಾನವೇ ಆಸ್ಪತ್ರೆಯಾಗಿ ಬದಲಾಗಿದೆ. ಅರೇ ಇದು ಯಾವ ಊರು. ಈ ಊರಿಗೆ ಎನಾಗಿದೆ. ಅಂತಿರಾ ಹಾಗಾದ್ರೆ ಈ ಸ್ಟೋರಿ ನೋಡಿ.
ಒಂದು ಕಡೆ ದೇವಸ್ಥಾನದಲ್ಲೇ ಡ್ರಾಪ್ಸ್ ಹಾಕಿಸಿಕೊಂಡು ಚಿಕಿತ್ಸೆ ಪಡೆಯುತ್ತಿರೋ ಜನರು.. ಮತ್ತೊಂದು ಕಡೆ ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನೆಡಸುತ್ತಿರೋ ಅಧಿಕಾರಿಗಳು.. ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದಲ್ಲಿ.. ಹೌದು ಕಳೆದ ಎರಡು ವಾರದಿಂದಲೂ ನೆರೆಬೆಂಚಿ ಗ್ರಾಮಸ್ಥರು ಸಾಮೂಹಿಕವಾಗಿ ವಿಪರೀತ ಜ್ವರಬಾಧೆಯಿಂದ ಬಳಲುತ್ತಿದ್ದಾರೆ. ಊರಿನ ಬೀರಲಿಂಗೇಶ್ವರ ದೇವಸ್ಥಾನದಲ್ಲಿನ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ರೋಗಿಗಳಿಗೆ ಚಿಕಿತ್ಸೆ ನಿಡಲಾಗ್ತಿದೆ. ವೃದ್ಧರು ಮಕ್ಕಳು, ಮಹಿಳೆಯರು ಸೇರಿದಂತೆ ಸಾಕಷ್ಟು ಜನ ಚಿಕಿತ್ಸೆ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಜನರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಅಗತ್ಯ ಸಿಬ್ಬಂದಿ, ಔಷಧಿಯೊಂದಿಗೆ ನೆರವಾಗುತ್ತಿದೆ. ಅನೇಕ ಜನರ ರಕ್ತದ ಮಾದರಿಗಳನ್ನೂ ಜಿಲ್ಲಾ ಕೇಂದ್ರದ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅದು ಡೆಂಗಿ ಅಲ್ಲ, ಚಿಕೂನ್‌ಗುನ್ಯಾ ಬಾಧೆಯೂ ಅಲ್ಲ ಎಂಬ ವರದಿ ಬಂದಿದೆ. ಮತ್ತ್ಯಾವ ಕಾಯಿಲೆ ನಮ್ಮನ್ನು ಕಾಡುತ್ತಿದೆ? ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದ್ದು ಭಯ ಬೀತರನ್ನಾಗಿಸಿದೆ.
ದೇವಸ್ಥಾನದ ಒಳ ಹೊರ ಆವರಣ ರೋಗಿಗಳಿಂದ ಭರ್ತಿಯಾಗಿದ್ದು ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಬಗಳಿಗೆ ದಾರ ಕಟ್ಟಿ ಅದಕ್ಕೆ ಇಳಿಬಿಟ್ಟ ಬಾಟಲಿಗಳ ಡ್ರಿಪ್ ಮೂಲಕ ಔಷಧಿ ನೀಡಲಾಗ್ತಿದೆ. ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸೆ ನೀಡಿ ಕುಷ್ಟಗಿ ತಾಲೂಕು ಆಸ್ಪತ್ರೆಗೆ ಕಳಿಸಲಾಗ್ತಿದೆ. ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿಯೂ ನೆರೆಬೆಂಚಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಗ್ರಾಮದಲ್ಲಿ ಎಲ್ಲಂದರಲ್ಲಿ ಚರಂಡಿ ನೀರು ಅಲ್ಲಲ್ಲಿ ನಿಂತಿದ್ದು ಇದರಿಂದ ಸಂಜೆ ವೇಳೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದು ಕೂಡ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿರಬಹುದು ಎಂದು ಹೇಳಲಾಗ್ತಿದೆ.
ಸಾಂಕ್ರಾಮಿಕ ರೋಗದಿಂದ ಇಡಿ ಗ್ರಾಮವೇ ಬೆಚ್ಚಿಬಿದ್ದಿದ್ದು ಸದ್ಯ ವ್ಯದ್ಯರ ತಂಡ ಗ್ರಾಮದಲ್ಲಿ ಬಿಡು ಬಿಟ್ಟಿದೆ. ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸೆ ನೀಡಿ ಹೆಚ್ವಿನ ಚಿಕಿತ್ಸೆ ಗಾಗಿ ಜನರನ್ನು ತಾಲೂಕ ಆಸ್ಪತ್ರೆಗೆ ಕಳಿಸಲಾಗ್ತಿದೆ. ಬೆಸಿಗೆಗೂ ಮುಂಚೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ಸಮಸ್ಯೆ ಉಂಟಾಗಿರಬಹದು ಎಂದು ವ್ಯದ್ಯರು ಅಭಿಪ್ರಾಯ ಪಟ್ಟಿದ್ದಾರೆ..