ಸೆಪ್ಟೆಂಬರ್ 6-7 ರಂದು ಗೌರಿ -ಗಣೇಶ ಹಬ್ಬದ ಹಿನ್ನಲೆ ಖಾಸಗಿ ಬಸ್ ಗಳ ಸಂಚಾರದ ಮೇಲೆ ಸಾರಿಗೆ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಖಾಸಗಿ ಬಸ್ ಮಾಲೀಕರಿಂದ ದುಬಾರಿ ಟಿಕೆಟ್ ದರ ವಸೂಲಿ ಆರೋಪ ಕೆಳಿಬಂದಿದ್ದು, ಆರ್ ಟಿ ಓ ಅಧಿಕಾರಿಗಳಿಂದ ಕಾರ್ಯಾಚರಣೆ ಆರಂಭವಾಗಿದೆ.
ಖಾಸಗಿ ಬಸ್ ಗಳ ಮೇಲೆ ಆರ್ಟಿಓ ಅಧಿಕಾರಿಗಳು ದಾಳಿ ನಡೆಸಿ ಬಸ್ ಗಳಲ್ಲಿ ಹೆಚ್ಚುವರಿ ಟಿಕೆಟ್ ವಸೂಲಿ ಬಗ್ಗೆ ಪರಿಶೀಲನೆ ನಡೆಸುತಿದ್ದಾರೆ. ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಶೋಭಾ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಬೆಂಗಳೂರು ವ್ಯಾಪ್ತಿಯ ಹತ್ತು ಆರ್ ಟಿ ಓ ಕಚೇರಿ ವ್ಯಾಪ್ತಿಯಲ್ಲಿ ದಾಳಿ ಹಾಗೂ ನಿಯಮ ಉಲ್ಲಂಘಿಸಿ ಹೆಚ್ಚುವರಿ ಟಿಕೆಟ್ ವಸೂಲಿ ಮಾಡುತ್ತಿದ್ದ ಬಸ್ ಗಳ ಮಾಲೀಕರು,ಚಾಲಕರ ವಿರುದ್ಧ, ಕ್ರಮಕ್ಕೆ ಮುಂದಾಗಿದ್ದಾರೆ…