‘ಡಬಲ್ ಇಸ್ಮಾರ್ಟ್’ ಸಿನಿಮಾದ ಮೂರನೇ ಹಾಡು ರಿಲೀಸ್..’ಕ್ಯಾ ಲಫ್ಡಾ’ ಅಂತಾ ಹೆಜ್ಜೆ ಹಾಕಿದ ರಾಮ್ ಪೋತಿನೇನಿ-ಕಾವ್ಯಾ ಥಾಪರ್
ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿರುವ ಡಬಲ್ ಇಸ್ಮಾರ್ಟ್ ಸಿನಿಮಾದ ಮೂರನೇ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಎರಡು ಸಾಂಗ್ಸ್ ಭರ್ಜರಿ ಹಿಟ್ ಆಗಿದ್ದು, ಇದೀಗ ಕ್ಯಾ ಲಫ್ಡಾ ಎಂಬ ಗೀತೆಯನ್ನು ಅನಾವರಣ ಮಾಡಲಾಗಿದೆ. ಈ ರೋಮ್ಯಾಂಟಿಕ್ ಹಾಡಿನಲ್ಲಿ ನಾಯಕ ಉಸ್ತಾದ್ ರಾಮ್ ಪೋತಿನೇನಿ ಹಾಗೂ ಕಾವ್ಯಾ ಥಾಪರ್ ಮಿಂಚಿದ್ದಾರೆ.
‘ಕ್ಯಾ ಲಫ್ಡಾ’ ಹಾಡಿಗೆ ಸಂಗೀತ ನಿರ್ದೇಶಕ ಮಣಿ ಶರ್ಮಾ ಟ್ಯೂನ್ ಹಾಕಿದ್ದಾರೆ. ಶ್ರೀ ಹರ್ಷ ಇಮಾನಿ ಸಾಹಿತ್ಯ ಬರೆದಿದ್ದು, ಧನುಂಜಯ್ ಸೀಪಾನ ಮತ್ತು ಸಿಂಧೂಜಾ ಶ್ರೀನಿವಾಸನ್ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ‘ಕ್ಯಾ ಲಫ್ಡಾ’ ರಾಮ್ ಮತ್ತು ಕಾವ್ಯಾ ನಡುವಿನ ಕೆಮಿಸ್ಟ್ರೀ ಪ್ರೇಕ್ಷಕರಿಗೆ ಇಷ್ಟವಾಗಿದೆ.
ಸೌತ್ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಅವರು ‘ಡಬಲ್ ಇಸ್ಮಾರ್ಟ್’ ಚಿತ್ರದಲ್ಲೂ ವಿಲನ್ ಆಗಿ ನಟಿಸಿದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಡಬಲ್ ಇಸ್ಮಾರ್ಟ್ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸ್ಯಾಮ್ ಕೆ. ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಛಾಯಾಗ್ರಾಹಕರಾಗಿ ದುಡಿದಿದ್ದಾರೆ.
ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿದ್ದಾರೆ. ಆಗಸ್ಟ್-15 ರಂದು ಚಿತ್ರ ಎಲ್ಲೆಡೆ ರಿಲೀಸ್ ಮಾಡಲಾಗುತ್ತಿದೆ. ವಿಶ್ವದಾದ್ಯಂತ ಬರ್ತಿರೋ ಈ ಚಿತ್ರದ ಪ್ರಚಾರ ಕೂಡ ಈಗಾಗಲೇ ಶುರು ಆಗಿದೆ.
2019ರಲ್ಲಿ ‘ಇಸ್ಮಾರ್ಟ್ ಶಂಕರ್’ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರುತ್ತಿದೆ. ಟಾಲಿವುಡ್‌ನಲ್ಲಿ ಈಗಾಗಲೇ ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ