#Exclusive NewsTop Newsಜಿಲ್ಲೆಸುದ್ದಿ
ಸಮಾಜದ ಶಾಂತಿಗಾಗಿ ತೀರ್ಥಂಕರರ ಉಪದೇಶ ಆದರ್ಶಪ್ರಾಯ ; ಲೋಕಸಭಾ ಸ್ಪೀಕರ್ ಓಂ ಬಿರ್ಲಾ

ಹುಬ್ಬಳ್ಳಿ : “ಮಾನವ ಕಲ್ಯಾಣಕ್ಕೆ ಮಹಾವೀರ, ಪಾರ್ಶ್ವನಾಥರ ವಿಚಾರಗಳು ಮಾರ್ಗದರ್ಶಿಯಾಗಿವೆ. ಅಹಿಂಸಾ ತತ್ವ, ಸೇವಾ ತ್ಯಾಗ ವಿಶ್ವಕ್ಕೆ ಮಾದರಿಯಾಗಿದ್ದು, ಮನುಷ್ಯ ಜೀವನಕ್ಕೆ ಮಹಾವೀರರು ಆದರ್ಶಪ್ರಾಯವಾಗಿದ್ದಾರೆ” ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದರು.
ಹುಬ್ಬಳ್ಳಿ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಒಂಭತ್ತು ತೀರ್ಥಂಕರರ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೂರಾರು ವರ್ಷಗಳ ಹಿಂದೆ ತೀರ್ಥಂಕರರು ಬೋಧಿಸಿದ ಅಹಿಂಸೆ, ಅಪರಿಗ್ರಹ, ಶಾಂತಿ, ತ್ಯಾಗ ಮೊದಲಾದ ತತ್ವಗಳು ಇಂದು ಎಂದಿಗಿಂತ ಪ್ರಸ್ತುತವಾಗಿವೆ ಅವುಗಳನ್ನು ಪ್ರಚಾರ ಮಾಡಿ ಜನರಿಗೆ ಮಾರ್ಗದರ್ಶನ ಮಾಡುವ ಅಗತ್ಯವಿದೆ.ಇದೇವೇಳೆ ಭಗವಾನ್ ಪಾರ್ಶ್ವನಾಥರ ಪುಟ್ಟ ಶಿಲಾ ಪ್ರತಿಮೆಗೆ ಓಂ ಬಿರ್ಲಾ ಮಹಾಮಸ್ತಕಾಭಿಷೇಕ ನೆರವೇರಿಸಿದರು.




