ತಮಿಳುನಾಡು: ಖ್ಯಾತ ತಮಿಳು ಸಾಹಿತಿ ಮತ್ತು ಕವಿ ವೈರಮುತ್ತು ಅವರು ರಾಮನ ಬಗ್ಗೆ ಆಡಿದ ಮಾತುಗಳು ಹೊಸ ವಿವಾದಕ್ಕೆ ಕಾರಣವಾಗಿವೆ. ಸೀತಾ ದೇವಿಯಿಂದ ದೂರವಾದ ರಾಮನು ಸ್ಥಿಮಿತತೆ ಕಳೆದುಕೊಂಡಿದ್ದರು ಎಂದು ಹೇಳುವ ಮೂಲಕ ತೀವ್ರ ವಿವಾದ ಹುಟ್ಟು ಹಾಕಿದ್ದಾರೆ.
ಪ್ರಾಚೀನ ಕವಿ ಕಂಬರ್ ಹೆಸರಿನ ಪ್ರಶಸ್ತಿ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸೀತಾಳಿಂದ ಬೇರ್ಪಟ್ಟ ನಂತರ ರಾಮ ಮಾನಸಿಕ ಅಸ್ವಸ್ಥನಾಗಿದ್ದು ನಾನು ಏನು ಮಾಡುತ್ತಿದ್ದೇನೆ ಎಂಬುದೇ ಗೊತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಡೆಯುವ ಅಪರಾಧಗಳನ್ನು ಐಪಿಸಿ ಸೆಕ್ಷನ್ 84 ಅಡಿ ಅಪರಾಧ ಎಂದು ಕರೆಯಲ ಆಗುವುದಿಲ್ಲ. ಕಂಬನ್‌ಗೆ ಕಾನೂನು ತಿಳಿದಿಲ್ಲದಿರಬಹುದು ಆದರೆ ಅವರಿಗೆ ಸಮಾಜ ಮತ್ತು ಮಾನವನ ಮನಸ್ಸು ತಿಳಿದಿತ್ತು ಎಂದು ಅವರು ಸಿಎಂ ಎಂಕೆ ಸ್ಟಾಲಿನ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ವೈರಮುತ್ತು ಅವರ ಹೇಳಿಕೆ ಸ್ವೀಕಾರಾರ್ಹವಲ್ಲ. ವೈರಮುತ್ತು ಅವರ ಹೇಳಿಕೆಗಳನ್ನು ಸಿಎಂ ಒಪ್ಪುತ್ತಾರೆಯೇ? ವೈರಮುತ್ತು ಅವರನ್ನು ದಡ್ಡ ಮತ್ತು ತನ್ನ ಮನಸ್ಸನ್ನು ಕಳೆದುಕೊಂಡಿರುವ ವ್ಯಕ್ತಿ ಎಂದು ಟೀಕಿಸಿದ್ದಾರೆ. ಹಿಂದೂ ದೇವತೆ ಆಂಡಾಳ್ ಬಗ್ಗೆ ಈ ಹಿಂದೆ ನೀಡಿದ್ದ ಹೇಳಿಕೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಕಿಡಿಕಾರಿದ್ದಾರೆ.


