ಬೆಂಗಳೂರು: ಊಟ ಬಡಿಸಲು ಹೇಳಿದ್ದಕ್ಕೆ ಬೈದಳೆಂದು ಮಗನೊಬ್ಬ ಹೆತ್ತ ತಾಯಿಯನ್ನೇ ರಾಡ್‌ನಿಂದ ಹೊಡೆದುಕೊಂದು ಠಾಣೆಗೆ ಬಂದು ಶರಣಾದ ಘಟನೆ ಬೆಂಗಳೂರಿನ ಕೆಆರ್ ಪುರಂನಲ್ಲಿ ನಡೆದಿದೆ.ನೇತ್ರಾ ಮೃತ ದುರ್ದೈವಿ, ಮಗ ಪವನ್ ಕೊಲೆ ಮಾಡಿರೋ ಆರೋಪಿ. ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ಓದುತ್ತಿರುವ ಮಗ ಪವನ್.
ಬೆಳಗ್ಗೆ ಕಾಲೇಜಿಗೆ ಹೋಗಲು ರೆಡಿಯಾಗಿದ್ದ ಪವನ್. ತಾಯಿಗೆ ಊಟ ಬಡಿಸುವಂತೆ ಹೇಳಿದ್ದಾನೆ. ಆದರೆ ತಾಯಿ ಆಗ ಬೇರೆ ಕೆಲಸದಲ್ಲಿ ನಿರತಳಾಗಿದ್ದು ಕೋಪದಲ್ಲಿ ಬೈದಿದ್ದ ತಾಯಿ ನೇತ್ರಾ. ನೀನು ನನ್ನ ಮಗನೇ ಅಲ್ಲ, ನಿನಗೆ ಊಟ ಹಾಕಲ್ಲ ಎಂದು ಬೈದಿದ್ದಳಂತೆ ತಾಯಿ. ಅಷ್ಟಕ್ಕೇ ಕೋಪಗೊಂಡ ಮಗ. ರಾಡ್‌ನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ರಾಡ್‌ನಿಂದ ಬಲವಾಗಿ ಹೊಡೆದಿದ್ದಕ್ಕೆ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾಳೆ.
ತಾಯಿ ಊಟ ಬಡಿಸದ್ದಕ್ಕೋ, ಬೈದಳೆಂದೋ ಒಟ್ಟಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತಾಯಿಯನ್ನು ಹೊಡೆದುಕೊಂದಿರೋ ಪಾಪಿ ಮಗ. ಕೊಲೆ ಮಾಡಿದ ಬಳಿಕ 8.30ರ ಸುಮಾರಿಗೆ ಸೀದಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿರೋ ಪೊಲೀಸರು. ಕೆ ಆರ್ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.