ಧಾರವಾಡ: ಮನೆಯ ಹಿತ್ತಲಲ್ಲಿದ್ದ ಶ್ರೀಗಂಧದ ಮರವನ್ನು ಖದೀಮರು ಸದ್ದಿಲ್ಲದೇ ಕಟಾವು ಮಾಡಿರುವ ಘಟನೆ ಧಾರವಾಡದ ಕಲ್ಯಾಣನಗರ ಎರಡನೇ ಕ್ರಾಸ್ ನಲ್ಲಿ ನಡೆದಿದೆ.
ತಡರಾತ್ರಿ 2 ಗಂಟೆ ಸುಮಾರಿಗೆ ಶ್ರೀಗಂಧ ಚೋರರು ಶ್ರೀಗಂಧದ ಮರಕ್ಕೆ ಕೊಡಲಿ ಏಟು ಕೊಟ್ಟಿದ್ದಾರೆ. ಅದಕ್ಕಿಂತ ಪೂರ್ವದಲ್ಲಿ ಬೀಟ್ ಪೊಲೀಸರು ಬಂದು ಹೋಗಿದ್ದು, ಬಳಿಕ ಖದೀಮರು ಶ್ರೀಗಂಧದ ಮರವನ್ನು ಕದ್ದು ಪರಾರಿಯಾಗಿದ್ದಾರೆ.
ಮನೆಯವರು ಬೆಳಿಗ್ಗೆ ನೋಡಿದಾಗ ಶ್ರೀಗಂಧದ ಮರ ಕಟಾವು ಆಗಿರುವುದು ಗೊತ್ತಾಗಿದೆ. ಇನ್ನು ಮೂವರು ಕಳ್ಳರ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಘಟನೆ ಸಂಬಂಧ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


