Thursday, November 20, 2025
19.9 C
Bengaluru
Google search engine
LIVE
ಮನೆ#Exclusive NewsTop Newsಉ.ಕ. ಮಂದಿಗೆ ಸಿದ್ದರಾಮಯ್ಯರ ಮೇಲಿದ್ದ ಗೌರವ ಕಡಿಮೆ ಆಯಿತು....!

ಉ.ಕ. ಮಂದಿಗೆ ಸಿದ್ದರಾಮಯ್ಯರ ಮೇಲಿದ್ದ ಗೌರವ ಕಡಿಮೆ ಆಯಿತು….!

1994 ಬ್ಯಾಚಿನ ಅತ್ಯಂತ ಗೌರವಾನ್ವಿತ ಪೋಲೀಸು ನೌಕರಿ ಮಾಡುತ್ತಿರುವ ಹಿರಿಯ ಪೋಲೀಸು ಅಧಿಕಾರಿ, ಧಾರವಾಡದ ಹೆಚ್ಚುವರಿ ಪೋಲೀಸು ವರಿಷ್ಠರಾದ ನಾರಾಯಣ.ವಿ.ಭರಮನಿಯರ ಜೊತೆಗೆ ತುಂಬಿದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆದು ಕೊಂಡ ಕೈ ಸನ್ನೆಯ ವರ್ತನೆ ಹಾಗೂ ಬಾಯಿಯಿಂದ ಉದುರಿಸಿದ ಲೆ.. ಅನ್ನುವ ಏಕವಚನದ ಮಾತುಗಳು ನಾಗರಿಕ ಸಮಾಜ ಮೆಚ್ಚುವಂತಹದಲ್ಲ. ಅದ್ಯಾಕೋ ಗೊತ್ತಿಲ್ಲ ಇಂತಹ ಮುಖ್ಯಮಂತ್ರಿಗಳ ವರ್ತನೆ ಸಾರ್ವಜನಿಕವಾಗಿ ಅಸಹ್ಯ ತರಿಸುತ್ತಿವೆ. ಹಿಂದೆ ವಿಜಯನಗರ ಜಿಲ್ಲೆಯ ಐಎಎಸ್ ಅಧಿಕಾರಿ ದಿವಾಕರ ಅವರಿಗೂ ಇಂತಹದೇ ವರ್ತನೆ ಮುಖ್ಯಮಂತ್ರಿಗಳಿಂದ ಆಗಿದ್ದೆ ಮತ್ತೊಮ್ಮೆ ಪುನರಾವರ್ತನೆ ಆಗಿದೆ ಅಷ್ಟೆ.

ಒಂದೆ ಒಂದು ಸಾರೀ ಇದೆ ಪೋಲೀಸು ಆಧಿಕಾರಿ ಎನ್. ವಿ. ಭರಮನಿ ನೌಕರಿ ಮಾಡಿದ ಬೀದರ್, ಗದಗ್, ಹುಬ್ಬಳ್ಳಿ, ಬೆಳಗಾವಿ ಹಾಗೂ ಸಧ್ಯ ಧಾರವಾಡದಲ್ಲಿ ಅವರ ಕುರಿತು ವಿಚಾರಿಸಲಿ, ಆ ಅಧಿಕಾರಿಯ ಇಲಾಖೆಯ ನಿಷ್ಟತೆಯ ಅರಿವು ಬರುತ್ತದೆ. ಮೊದಲ ಸಾರೀ ಹಾಗೂ ಸಧ್ಯ ಎರಡನೇಯ ಬಾರಿಗೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಪ್ರತೀ ಅಧಿವೇಶನದಲ್ಲಿ ನಡೆದ ಹೊರಗಿನ ಸರಕಾರದ ವಿರುದ್ಧದ ಹೋರಾಟವನ್ನು ನಿಯಂತ್ರಿಸಿದ ಬಗೆಯನ್ನು ಅರಿತರು ಸಾಕು ಆ ಅಧಿಕಾರಿಯ ಅಸಲೀಯತ್ತು ತಿಳಿಯುತ್ತದೆ. ಇದೆ ಗೂಗಲ್ ಗೆ ಹೋಗಿ ಅವರ ಹೆಸರು ಹೊಡೆದರು ಅವರ ದಿಟ್ಟತನದ ಪೋಲಿಸಿಂಗ್ ಕುರಿತು ಮಾಹಿತಿ ಹೆಕ್ಕಬಹುದು.

ಬೆಳಗಾವಿಯ ಘಟನೆಯಿಂದ ಭರಮನಿ ಅಂತಹ ಅಧಿಕಾರಿಗಳಿಗೆ ಆಗುವ ಮಾನಸಿಕ ಹಿಂಸೆ ಅದೆಂತಹದು..? ರಾಜಕಾರಣಿಗಳನ್ನು ತಮ್ಮ ಮನೆಯ ಹೆಂಡತಿ, ಮಕ್ಕಳು ಹಾಗೂ ಪಾಲಕರನ್ನು ಬಿಟ್ಟು ಹೊತ್ತಿಲ್ಲದ ಹೊತ್ತಿನಲ್ಲಿ ಒಬ್ಬ ಪೋಲೀಸು ಆಧಿಕಾರಿ ಸರಕಾರದ ಆಸ್ತಿ ಎನ್ನುವಂತೆ ಅದೆಲ್ಲ ರೀತಿಯ ಸೇವೆಗೆ ಕಂಕಣ ಬದ್ಧರಾಗಿ ನಿಲ್ಲುವವರ ಪರಿಸ್ಥಿತಿಯೇ ಹಿಂಗಾದರೆ, ಅದೇ ಇಲಾಖೆಯ ಯಕಶ್ಚಿತ ಪೇದೆಯ ಗತಿ ಇನ್ನೇನು ಆಗಬೇಡ..? ಸದ್ಯ ಇದು ಸಾರ್ವಜನಿಕವಾಗಿ ಚರ್ಚೆ ಆಗುತ್ತಿದೆ. ಇಂತಹ ರಾಜಕಾರಿಣಿಗಳ ದುರ್ವರ್ತನೆಯಿಂದ ಪೋಲೀಸ ಇಲಾಖೆಯ ಆತ್ಮಸ್ಥರ್ಯದ ಗತಿ..? ಛೇ.. ನೆನಸಿಕೊಂಡರೆ ಪೋಲೀಸ ಇಲಾಖೆಯ ನೌಕರರ ಕುರಿತು ಅಯ್ಯೋ ಪಾಪ ಅನಿಸುತ್ತದೆ.


ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಆದ ಪೋಲೀಸ್​ ಅಧಿಕಾರಿಯ ದುರ್ವರ್ತನೆ ಘಟನೆಯ ಕುರಿತು ಇನ್ನಾದರೂ ಸಣ್ಣ ಪ್ರತಿಭಟನೆಯ ಅವಶ್ಯಕತೆ ಪೋಲೀಸ್​ ಇಲಾಖೆಯ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳು ಮಾಡದಿದ್ದರೆ, ಇಂತಹ ರಾಜಕಾರಿಣಿಗಳ ಕೈಯಲ್ಲಿ ಪೋಲೀಸ್​ ಇಲಾಖೆ ಪುಟ್ ಬಾಲ್ ಆಗುವ ದಿನಗಳು ದೂರ ಇಲ್ಲ. ಈ ಕುರಿತು ಪೋಲೀಸ್​ ಇಲಾಖೆಯಲ್ಲಿ ಇನ್ನಾದರೂ ಆತ್ಮ ವಿಮರ್ಶೆಯ ಅವಶ್ಯಕತೆ ಇದೆ.

ಇದೇ ಬೆಳಗಾವಿ ನಾಡಲ್ಲಿ ಸಿದ್ದರಾಮಯ್ಯರು “ಹೌದ್ದ ಹುಲಿಯಾ” ಎಂದೆನಿಸಿ ಕೊಂಡವರು ಇವತ್ತು ಅಧಿಕಾರಿಯ ವಿರುದ್ಧ ತೋರಿದ ವರ್ತನೆ, ಬಾಯಿ ಮಾತುಗಳು ಅದ್ಯಾಕೋ ಅಸಹ್ಯ ಅನಿಸಿದ್ದು ಸತ್ಯ. ಇದೇ ಕಾರಣಕ್ಕಾಗಿ ಸಮಸ್ತ ಉತ್ತರ ಕರ್ನಾಟಕದ ಮುಖ್ಯಮಂತ್ರಿಗಳನ್ನು ಪ್ರೀತಿಸುತ್ತಿದ್ದವರು, ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದವರಿಗೆ ಸಾಕಷ್ಟು ಮುಖ ಕಿವಚು ಅಂತಹ ವಾತಾವರಣ ತಲೆದೋರಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments