ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಭಂದಿಸಿದಂತೆ, ಶಾಸಕಿ ಶಶಿಕಲಾ ಜೊಲ್ಲೆ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಮಹಿಳೆಯರಿಗೆ ಸುರಕ್ಷತೆಯ ಪ್ರಶ್ನೆ ಹುಟ್ಟುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಘಟನೆಗೆ ಜವಾಬ್ದಾರರು. ಸರ್ಕಾರ ಬಂದ 10 ತಿಂಗಳಲ್ಲೇ ಹೃದಯ ವಿದ್ರಾವಕ ಘಟನೆಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.
ನನಗೆ ಕಾಂಗ್ರೆಸ್ ನಾಯಕರ ಮೇಲೆ ಅವರ ಪಕ್ಷದ ಮೇಲೆ ಭರವಸೆ ಇಲ್ಲಾ. ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಬಿಜೆಪಿ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆಗಳಾಗುತ್ತಿದೆ. ಜೊತೆಗೆ ನೀರಿನ ವ್ಯವಸ್ಥೆ,ರಾಜ್ಯದ ಹೆಣ್ಣು ಮಕ್ಕಳಿಗೆ, ರೈತರ ಬುದುಕಿಗೆ ಗ್ಯಾರಂಟಿ ಇಲ್ಲಾ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇವತ್ತಿನ ಸಾವುಗಳನ್ನು ನೋಡಿದಾಗ ರಾಜ್ಯ ಸರ್ಕಾರ ವಿಫಲ ಆಗಿದೆ. ನೇಹಾ ಹತ್ಯೆ ಆಕಸ್ಮಿಕ ಘಟನೆ ಅಲ್ಲ.. ಅದು ಬೇಕೆಂದಲೇ ಮಾಡಿರುವಂತಹದ್ದು. ಚೂರಿ ಇಟ್ಟುಕೊಂಡು ಓಡುವುದು ಆಕಸ್ಮಿಕನಾ..? ಎಂದು ಪ್ರಶ್ನಿಸಿದರು.