ಶಿಡ್ಲಘಟ್ಟ : ನಗರದ ಜನರು ನೆಮ್ಮದಿಯಾಗಿರಬೇಕಾದ್ರೆ ಪೌರಕಾರ್ಮಿಕರ ಸೇವೆ ತುಂಬಾ ಮುಖ್ಯ. ದಿನಬೆಳಗಾದ್ರೆ ಇವರು ಕಾಯಕಕ್ಕೆ ಇಳೀತಾರೆ. ಇವರಿಲ್ಲದೆ ನಗರದ ಬೀದಿ, ಬೀದಿ ಸ್ವಚ್ಚವಾಗಿರೋದಿಲ್ಲ. ನಗರದ ಜನರು ನೆಮ್ಮದಿಯಾಗಿರಬೇಕಾದ್ರೆ ಪೌರಕಾರ್ಮಿಕರ ಸೇವೆ ತುಂಬಾ ಮುಖ್ಯ. ಇಂತಹ ಪೌರಕಾರ್ಮಿಕರಿಗೆ ಸಮಸ್ಯೆ ಬಂದ್ರೆ ಪರಿಹಾರ ಮಾಡೋಕೆ ಯಾವ ಅಧಿಕಾರಿಯೂ ಅಷ್ಟು ಮುತುವರ್ಜಿ ತೋರಲ್ಲ. ಇಂತಹ ನಿರ್ಲಕ್ಷಕ್ಕೆ ಒಳಗಾಗಿರುವ ನೌಕರರು ತಮ್ಮ ಬೇಡಿಕೆಗಳ ಆಗ್ರಹಕ್ಕಾಗಿ ಒಂದು ಸಂಘಟನೆ ಮಾಡಿಕೊಂಡಿದ್ದಾರೆ. ಸಂಘಟನೆಯ ಮೂಲಕ ತಮ್ಮ ಬೇಡಿಕೆಗಳನ್ನು ಅಧಿಕಾರಿಗಳಿಗೆ ಮುಟ್ಟಿಸಿ ತಮ್ಮ ಹಕ್ಕನ್ನು ತಾವು ಪಡೆಯಲು ಮುಂದಾಗಿದ್ದಾರೆ. ಇದಕ್ಕಾಗಿಯೇ ಕರ್ನಾಟಕ ರಾಜ್ಯ ಪೌರನೌಕರರ ಸಂಘ ಹುಟ್ಟು ಹಾಕಲಾಗಿದೆ. ಇವತ್ತು ಶಿಡ್ಲಘಟ್ಟ ನಗರಸಭೆಯ ಪೌರನೌಕರರ ಸಂಘ ತಮ್ಮ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಸಿದ್ರು.
ಸುಮಾರು ೮೦ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಶಿಡ್ಲಘಟ್ಟ ನಗರಸಭೆಯಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಪೌರ ಕಾರ್ಮಿಕರು ಹಾಗೂ ನೌಕರರು ಕೆಲಸ ಮಾಡ್ತಿದ್ದಾರೆ. ಇವರಿಗೆ ಸರ್ಕಾರದ ಸಂಪೂರ್ಣ ಸವಲತ್ತುಗಳು ನೇರವಾಗಿ ಸಿಗ್ತಿಲ್ಲ ಹೀಗಾಗಿ ನೌಕರರ ಸಂಘದ ಮೂಲಕ ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲು ಪೌರನೌಕರರ ಸೇವಾ ಸಂಘ ಬಹಳಷ್ಟು ಕ್ರೀಯಾಶಿಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಳೆದ ಸುಮಾರು ೧೪ ವರ್ಷಗಳಿಂದ ಪೌರ ಕಾರ್ಮಿಕರಾಗಿ ನೇರ ನೇಮಕಾತಿಯಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿಯನ್ನು ಖಾಯಂಗೊಳಿಸುವ ಪ್ರಕ್ರಿಯೆ ಆಗಿರಲಿಲ್ಲ.
ಇದರಿಂದ ನೊಂದಿದ್ದ ಕಾರ್ಮಿಕರು ಸಂಘಕ್ಕೆ ಮೊರೆ ಹೋಗಿದ್ರು. ಹಲವು ಹೋರಾಟಗಳು ನಡೆಸುವ ಮೂಲಕ ಈಗಾಗಲೆ ೩೬ ಪೌರ ಕಾರ್ಮಿಕರನ್ನು ಸರ್ಕಾರ ಖಾಯಂಗೊಳಿಸುವಂತೆ ಮಾಡಲಾಗಿದೆ. ಉಳಿದಂತೆ ಇನ್ನೂ ೨೮ ಜನ ಕಾರ್ಮಿಕರು ಅರೆ ನೇಮಕಾತಿಯಲ್ಲಿ ಉಳಿದಿದ್ದಾರೆ. ಅವರನ್ನೂ ಕೂಡ ಹುದ್ದೆಯಲ್ಲಿ ಖಾಯಂಗೊಳಿಸುವ ಪ್ರಕ್ರಿಯೆಗೆ ಹೋರಾಟ ಮುಂದುವರೆದಿದೆ ಎಂದು ರಾಜ್ಯ ಕಾರ್ಯಾಧ್ಯಕ್ಷ ಮುರಳಿ ತಿಳಿಸಿದ್ದಾರೆ.
ಇವತ್ತು ಶಿಡ್ಲಘಟ್ಟ ನಗರಸಭೆ ಪೌರನೌಕರರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕುಮಾರ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮುನಿಯಪ್ಪ, ಎಲ್ಲಮ್ಮ ಆಯ್ಕೆಯಾಗಿದ್ದಾರೆ ಸಂಘಟನೆ ಕಾರ್ಯದರ್ಶಿಯಾಗಿ ರವಿಕುಮಾರ್, ಖಜಾಂಚಿಯಾಗಿ ರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಆಯ್ಕೆಯಾಗಿದ್ದಾರೆ. ಮೂರು ವರ್ಷಗಳ ಕಾಲವಧಿಯಲ್ಲಿ ಈ ಸಂಘ ಕಾರ್ಯ ನಿರ್ವಹಿಸಲಿದೆ.