Tuesday, January 27, 2026
26.7 C
Bengaluru
Google search engine
LIVE
ಮನೆರಾಜಕೀಯಇಂದು ಬಹುನಿರೀಕ್ಷಿತ ಬಿಬಿಎಂಪಿ ಬಜೆಟ್​ ಮಂಡನೆ

ಇಂದು ಬಹುನಿರೀಕ್ಷಿತ ಬಿಬಿಎಂಪಿ ಬಜೆಟ್​ ಮಂಡನೆ

ಬೆಂಗಳೂರು: ಇಂದು ಬಹುನಿರೀಕ್ಷಿತ 2025-26ನೇ ಸಾಲಿನ ಬಿಬಿಎಂಪಿ ಬಜೆಟ್​ ಮಂಡನೆಯಾಗಲಿದೆ. 19000 ಕೋಟಿ ರೂ ಬಜೆಟ್​ ಮಂಡಿಸಲು ಬಿಬಿಎಂಪಿ ಆಯುಕ್ತ ಸಿದ್ದತೆ ಮಾಡಿಕೊಂಡಿದ್ದಾರೆ.

ಟೌನ್​ಹಾಲ್​ನಲ್ಲಿ ಬಜೆಟ್​ ಮಂಡನೆಯಾಗಲಿದ್ದು, ಚುನಾಯಿತ ಪ್ರತಿನಿಧಿಗಳು ಇಲ್ಲದೆ 5ನೇ ಬಾರಿಗೆ ಬಿಬಿಎಂಪಿ ಬಜೆಟ್​ನ್ನು ಅಧಿಕಾರಿಗಳು ಮಂಡನೆ ಮಾಡುತ್ತಿದ್ದಾರೆ. ತುಷಾರ್ ಗಿರಿನಾಥ್ ಅಧ್ಯಕ್ಷತೆಯಲ್ಲಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಬಜೆಟ್ ಮಂಡಿಸಲಿದ್ದಾರೆ. ಇನ್ನು ಈ ಬಾರಿಯ ಬಿಬಿಎಂಪಿ ಬಜೆಟ್​ಗೆ ಹಲವು ನಿರೀಕ್ಷೆಗಳನ್ನು ಇಡಲಾಗಿದೆ.

ಬಿಬಿಎಂಪಿ ಬಜೆಟ್ ನಿರೀಕ್ಷೆಗಳೇನು?

  • ರಸ್ತೆ ಗುಂಡಿ ಮುಕ್ತಿ, ನಗರದ ಸ್ವಚ್ಛತೆ, ಸುಗಮ ಸಂಚಾರ, ಹಸೀರಕರಣ, ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ಸಿಗಲಿದೆ.
  • ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ಪರಿಹರಿಸುವ ಯೋಜನೆ ರೂಪಿಸಲಾಗಿದೆ.
  • ಪೂರ್ವ ಮತ್ತು ಪಶ್ಚಿಮ, ಉತ್ತರ ಮತ್ತು ದಕ್ಷಿಣ ಭಾಗದ ಸುರಂಗ ನಿರ್ಮಾಣದ ಯೋಜನೆ ಪ್ರಸ್ತಾಪ ಆಗಲಿದೆ.
  • ರಸ್ತೆಗಳಲ್ಲಿ ನೀರು ನಿಲ್ಲದಂತೆ ಪ್ರವಾಹ ನಿಯಂತ್ರಣಕ್ಕೆ ಯೋಜನೆ ರೂಪಿಸುವ ಸಾಧ್ಯತೆ.
  • ಇಂದಿರಾ ಕ್ಯಾಂಟೀನ್ ಗೆ ಹೆಚ್ಚಿನ ಅನುದಾನ. ಹೆಚ್ಚುವರಿಯಾಗಿ 52 ಹೊಸ ಇಂದಿರಾ ಕ್ಯಾಂಟೀನ್ ನಿರ್ಮಾಣ ಸಾಧ್ಯತೆ.
  • ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಆ್ಯಂಬುಲೆನ್ಸ್ ಘೋಷಣೆ ಸಾಧ್ಯತೆ
  • ಬಿಬಿಎಂಪಿ 20 ಆಸ್ಫತ್ರೆ ಗಳನ್ನ ಮೇಲ್ದರ್ಜೆಗೆ ಏರಿಸಲಿದ್ದಾರೆ.
  • ಬಿಬಿಎಂಪಿ ಶಾಲೆ ಕಾಲೇಜು ಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ.. ಪ್ರತಿ ಶಾಲೆ ಕಾಲೇಜುಗಳಿಗೂ ಮೂಲಭೂತ ಸೌಕರ್ಯ ವ್ಯವಸ್ಥೆ.
  • ಸರ್ಕಾರದ ಸಹಭಾಗಿತ್ವದಲ್ಲಿ ಬೃಹತ್ ಕಾಮಗಾರಿಗಳ ನಿರ್ಮಾಣಕ್ಕೆ ನಿಗಮ ಸ್ಥಾಪನೆ ಸಾಧ್ಯತೆ
  • ನಗರದ ಟ್ರಾಫಿಕ್ ಕಂಟ್ರೋಲ್‌ಗೆ ಪ್ಲೈಓವರ್, ಟನಲ್ ರಸ್ತೆ, ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ.
  • ಮಳೆಗಾಲದಲ್ಲಿ ರಾಜಕಾಲುವೆ ನೀರು ರಸ್ತೆಗೆ ಬರದಂತೆ ತಡೆಗೋಡೆ ನಿರ್ಮಾಣ.
  • ಮೆಟ್ರೋ ನಿಗಮದ ಜೊತೆ ಸೇರಿ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ ಸಾಧ್ಯತೆ.
  • ಸಾರ್ವಜನಿಕರಿಗೆ ತೆರಿಗೆ ಕಟ್ಟಲು ದಿನದ 24 ಗಂಟೆ ಅನ್ ಲೈನ್ ವ್ಯವಸ್ಥೆ.
  • ಪ್ರಸಕ್ತ ವರ್ಷ 6 ಸಾವಿರ ಕೋಟಿ ತೆರಿಗೆ ವಸೂಲಿಗೆ ಪ್ರಸ್ತಾವನೆ ಸಾಧ್ಯತೆ
  • ಮಳೆಗಾಲದಲ್ಲಿ ಒಣಗಿದ ಮರ.ಕೊಂಬೆಗಳ ತೆರವಿಗೆ ಹೆಚ್ಚಿನ ಅನುದಾನ. ಮಳೆಗಾಲದಲ್ಲಿ ಒಣಗಿದ ಮರ.ಕೊಂಬೆಗಳ ತೆರವಿಗೆ ಹೆಚ್ಚುವರಿ ಸಿಬ್ಬಂದಿಗಳ ನೇಮಕ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments