ಗೋವಾ : ಇದು ಕರುಳುಹಿಂಡುವಂತಹ ಕಥೆ..ಇಲ್ಲಿ ಸಿಟ್ಟಿದೆ.. ಸೇಡಿದೆ..ಮಾನಸಿಕ ಹಿಂಸೆ ಇದೆ..ತಾಯಿಯೊಬ್ಬಳು ಹೆತ್ತ ಮಗುವನ್ನ ಕೊಲ್ಲುವುದು ಅಂದ್ರೆ ಅದು ತಾಯಿ ಕುಲಕ್ಕೆ ಅವಮಾನ..ಕೋಪದ ಕೈಗೆ ಬುದ್ದಿ ಕೊಟ್ಟಿದ್ದರ ಫಲ ಮಗು ಮಸಣದ ಪಾಲಾಗಿ ಹೋಗಿದೆ.. ತಂದೆಯೇ ತನ್ನ ಮಗುವಿನ ಅಂತ್ಯಕ್ರಿಯೆ ಮಾಡೋ ನೋವಿದೆಯಲ್ಲ..ಅದನ್ನ ಅಕ್ಷರಶಃ ಅಕ್ಷರಗಳಲ್ಲಿ ಬಣ್ಣಿಸೋಕೆ ಸಾಧ್ಯವಿಲ್ಲ.
ಯಾವ ತಂದೆಗೂ ಇಂತಹ ಸ್ಥಿತಿ ಬಾರದಿರಲಿ…ಯಾವ ತಾಯಿಯೂ ಇಂತಹದ್ದೊಂದು ಕೃತ್ಯ ಮಾಡದಿರಲಿ.. ಪಂಚನಾಮೆಯ ಮಂಚದ ಮೇಲೆ ಮಲಗಿದ್ದ ಶವ ನೋಡಿ ಖುದ್ದು ಶವಪರೀಕ್ಷೆಗೆ ಬಂದ ವೈದ್ಯರ ಕಣ್ಣಂಚಲ್ಲಿ ನೀರು ಜಿನುಗಿದ್ವು ಅಂದ್ರೆ…ತಾನೇ ಹೆತ್ತ ಮಗುವಿನ ಶವದ ಮೇಲೆ ಮಣ್ಣಾಕುವಾಗ ಆ ತಂದೆಯ ನೋವು ಎಷ್ಟಿರಬೇಡ ಹೇಳಿ..ಹೌದು…ಗೋವಾದಲ್ಲಿ ತನ್ನದಲ್ಲದ ತಪ್ಪಿಗೆ..ತಾಯಿಯ ಕ್ಷಣ ಮಾತ್ರದ ಸಿಟ್ಟಿಗೆ ತಪ್ಪೇ ಮಾಡದ ಕಂದಮ್ಮ ಮಣ್ಣಲ್ಲಿ ಲೀನವಾಗಿದೆ.
ಚಿತ್ರದುರ್ಗದ ಶವಗಾರದಿಂದ ಶವಪರೀಕ್ಷೆ ಮುಗಿದ ಬಳಿಕ ಮುದ್ದಾದ ಮಗುವಿನ ದೇಹವನ್ನ ಎದೆಗವುಚಿಕೊಂಡು ಯಶವಂತಪುರದ ಬ್ರಿಗೇಡ್ ಗೇಟ್ ವೇ ಪ್ರೆಸ್ಟೀಜ್ ಅಪಾರ್ಟ್ಮೆಂಟ್ಗೆ ತಂದ ತಂದೆಯ ದುಃಖ ಎಂಥಹದ್ದಿರಬೇಕು..? ಅದನ್ನ ಅಕ್ಷರಶಃ ಅಕ್ಷರಗಳಲ್ಲಿ ಬಣ್ಣಿಸೋಕೆ ಸಾಧ್ಯವಿಲ್ಲ. ಹೆತ್ತ ಮಗುವಿನ ಹೆಣ ಹಾಕಿ ಗೋವಾದ ಪೊಲೀಸರ ಎದುರು ಮಂಡಿಯೂರಿ ಕುಳಿತು ಗಂಟೆಗೊಂದು ಹೇಳಿಕೆ ನೀಡುತ್ತಿರುವ ಈ ಹೆಣ್ಣು ಮಗಳು ಸುಚನಾ ಸೇಠ್ ತಾಯಿ ಕುಲಕ್ಕೆ ಮಸಿ ಬಳಿದಿದ್ದಾಳೆ.. ಇನ್ನು ಮಡದಿ ಮಾಡಿದ ಭೀಕರ ಕೃತ್ಯಕ್ಕೆ ತನ್ನ ಮುದ್ದಾದ ಮಗುವನ್ನ ಕಳೆದುಕೊಂಡಿರುವ ತಂದೆ ವೆಂಕಟರಮಣ ಮಗುವಿನ ಹೆಣದ ಮೇಲೆ ಮಣ್ಣಾಕಿ ಭಾರವಾದ ನೆತ್ತಿ ಮೇಲೆ ಕೈ ಹೊತ್ತು ಕೂತಿದ್ದಾನೆ.. ಇವರಿಬ್ಬರು ತುಂಬಾ ಓದಿಕೊಂಡವರು…ಆದ್ರೆ ವೈವಾಹಿಕ ಬದುಕಿನಲ್ಲಿ ಮಾಡಿಕೊಂಡ ಯಡವಟ್ಟುಗಳು ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಿವೆ.. ಅವಳೀಗ ಗೋವಾ ಪೊಲೀಸ್ರ ಮುಂದೆ ಕೊಟ್ಟಿರೋ ತಪ್ಪೊಪ್ಪಿಗೆ ಹೇಳಿಕೆ ಮತ್ತೊಂದು ಕಥೆಯನ್ನ ಬಿಡಿಸಿಟ್ಟಿದೆ.
ವೈದ್ಯರ ಪ್ರಕಾರ ಆಕೆ ಗೋವಾಗೆ ಬಂದ ದಿನ ರಾತ್ರಿಯೇ ಮಗುವನ್ನ ಉಸಿರುಗಟ್ಟಿಸಿ ಕೊಂದಿರೋ ಸಾಧ್ಯತೆ ಇದೆ.. ಮಗುವನ್ನ ಕೊಂದ ಬಳಿಕ ಆಕೆ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.. ಆಕೆಯ ಎಡಗೈ ಕೊಯ್ದುಕೊಂಡು ಸಾಯೋಕೆ ಮುಂದಾಗಿದ್ದಾಳೆ..ಆದ್ರೆ ಅದು ಸಾಧ್ಯವಾಗಿಲ್ಲ..ಹೀಗಾಗಿ ಏನು ಮಾಡ್ಬೇಕು ಅಂತ ತೋಚದೆ ಅಲ್ಲಿಂದ ಎಸ್ಕೇಪ್ ಆಗೋಕೆ ಪ್ಲಾನ್ ಮಾಡಿದ್ದಾಳೆ.. ಬಟ್ ಅವಳ ಪ್ಲ್ಯಾನ್ ವರ್ಕ್ ಔಟ್ ಆಗಿಲ್ಲ.. ರಕ್ತದ ಕಲೆಗಳನ್ನ ಅಲ್ಲೇ ಬಿಟ್ಟು ಬಂದಿದ್ಲು..ಅಲ್ಲದೇ ಹೋಗುವಾಗ ಇದ್ದ ಮಗು ಬರುವಾಗ ಇಲ್ಲ ಅನ್ನೋದು ಮತ್ತೊಂದು ಸುಳಿವು ಸಿಗುವಂತೆ ಮಾಡಿತ್ತು..ಇವುಗಳ ಜೊತೆಗೆ ಮಗುವನ್ನ ಗೆಳತಿ ಮನೆಯಲ್ಲಿ ಬಿಟ್ಟಿರೋದಾಗಿ ಹೇಳಿದ್ಲು..ಎಲ್ಲವೂ ಸುಳ್ಳೆ…ಅಲ್ಲಿಗೆ ಪೊಲೀಸ್ರ ಅನುಮಾನ ನಿಜವಾಗಿತ್ತು.. ಚಿತ್ರದುರ್ಗದಲ್ಲಿ ಖೋಳ ತೋಡಿಸಿಯೇಬಿಟ್ರು.
ಇವಳೇನೋ ಆತುರದ ನಿರ್ಧಾರಕ್ಕೆ ಬಿದ್ದು ಏನು ಅರಿಯದ ಮುಗ್ಧ ಕಂದನ ಕತ್ತು ಹಿಸುಕಿ ಕೊಂದು ಮುಗಿಸಿದ್ಲು.. ಆದ್ರೆ ಈ ತಂದೆಯ ದುಃಖಕ್ಕೆ ಸಮಾಧಾನ ಹೇಳೋದು ಹೇಗೆ..? ಮಗುವಿನ ಕೊಲೆಯಾಗಿದೆ ಅನ್ನೋ ಸುದ್ದಿ ತಿಳಿಯುತ್ತಲೇ ದೂರದ ಇಂಡೋನೇಷಿಯಾದಲ್ಲಿದ್ದ ವೆಂಕಟರಮಣ ಓಡೋಡಿ ಬಂದಿದ್ದಾನೆ.. ಚಿತ್ರದುರ್ಗದ ಶವಗಾರದಲ್ಲಿರೋ ತನ್ನ ಮಗುವಿನ ಶವವನ್ನ ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.. ಶವ ಪರೀಕ್ಷೆ ಬಳಿಕ ಮಗುವನ್ನ ಎದೆಗವುಚಿಕೊಂಡು ತಂದು ಮಣ್ಣಿಗಿಡುವಾಗ ಆತನ ರೋಧನೆ, ಸಂಬಂಧಿಕರ ಆಕ್ರಂದನ, ನೆರೆಹೊರೆಯವರ ಮನಸ್ಸಿನ ತೊಳಲಾಟ..ವರ್ಣಿಸೋಕೆ ಸಾಧ್ಯವಿಲ್ಲ.
ಹರಿಶ್ಚಂದ್ರ ಘಾಟ್ ನಲ್ಲಿ ಮಗುವಿನ ಅಂತ್ಯ ಸಂಸ್ಕಾರ ಮುಗಿದಿದೆ.. ವೆಂಕಟರಮಣನನ್ನೂ ಕೂಡ ಗೋವಾ ಪೊಲೀಸ್ರು ವಿಚಾರಣೆಗೆ ಒಳಪಡಿಸೋ ಸಾಧ್ಯತೆ ಇದೆ.. ಇದೊಂದು ದಾರುಣ ಕೃತ್ಯ.. ತಾಯಿ ಜೈಲು ಪಾಲಾಗೋದು ಕನ್ಷರ್ಮ್..ಇನ್ನು ತಂದೆಗೆ ಪುತ್ರ ಶೋಖಂ ನಿರಂತರಂ ಅನ್ನೋದು ಸತ್ಯ..ಆದ್ರೆ ಜಗತ್ತಿನ ಪರಿವೇ ಇಲ್ಲದೆ ತೊದಲು ನುಡಿಗಳನ್ನಾಡುತ್ತಾ ಬಾಳಿ ಬದುಕಬೇಕಾದ ಮಗು ಮಾಡಿದ ತಪ್ಪಾದ್ರೂ ಏನು..? ತಾಯಿ ಕುಲವೇ ತಲೆತಗ್ಗಿಸುವಂತಹ ಕೃತ್ಯ ಮಾಡಿದವಳು ಮಾತ್ರ ನಾನ್ಯಾಕೆ ಕೊಂದೆ ಅಂದ್ರೆ ಅಂತ ಪೊಲೀಸ್ರ ಮುಂದೆ ಕಥೆ ಕುಟ್ಟತೊಡಗಿದ್ದಾಳೆ..ಜಸ್ಟ್ ಅರೆಕ್ಷಣ ಯೋಚಿಸಿದ್ರು ಸಾಕಿತ್ತು..ಮುದ್ದಾದ ಹೂವು ಅರಳುವ ಮುನ್ನವೇ ಬಾಡಿ ಹೋಗ್ತಾ ಇರಲಿಲ್ಲ..ಅಲ್ವಾ..? ಮಗುವಿನ ಶವವನ್ನ ಎದೆಗವುಚಿಕೊಂಡು ಮಣ್ಣಿಗಿಟ್ಟ ತಂದೆಯ ದುಃಖಕ್ಕೆ ಸಮಾಧಾನ ಹೇಳೋದು ಹೇಗೆ..?